ಹುಬ್ಬಳ್ಳಿ: ಇಲ್ಲಿನ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಯಲು ಜಾಗೆಯಲ್ಲಿ ಎಂಟು ವರ್ಷದ ಬಾಲಕ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಉಣಕಲ್ಲ ಸಾಯಿನಗರದ ನದೀಮ್ ಹುಬ್ಬಳ್ಳಿ (೮) ಸಾವನ್ನಪ್ಪಿದ್ದ ಬಾಲಕ. ಕಳೆದ ಮೂರು ದಿನದ ಹಿಂದೆ ಅಜ್ಜಿ ಮನೆಗೆ ಬಂದಿದ್ದನು. ಕಳೆದ ಸಂಜೆಯಿಂದ ಮೆನಯಿಂದ ಕಾಣಿಸಿರಲಿಲ್ಲ. ಹುಡುಕಾಡಿದರು ಮಗು ಸಿಕ್ಕಿರಲಿಲ್ಲ. ಮನೆ ಹತ್ತಿರದ ಬಯಲು ಜಾಗೆಯಲ್ಲಿ ಜಾಲಿ ಕಂಟಿಯಲ್ಲಿ ಮಗುವಿನ ದೇಹ ಸಿಕ್ಕಿದೆ. ಬೆಂಡಿಗೇರಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.