ಮೂಡಲಗಿ : ದಾಖಲೆ ಇಲ್ಲದ ಹಣ ಸೀಜ್ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಹಳ್ಳೂರ ಚೆಕ್ ಪೊಸ್ಟ್’ನಲ್ಲಿ ಶುಕ್ರವಾರ ನಡೆದಿದೆ. ಕಾರಿನಲ್ಲಿ ಹಣ ಸಾಗಿಸುವಾಗ ತಪಾಸಣೆ ವೇಳೆ ಪತ್ತೆಯಾಗಿದೆ. ದಾಖಲೆ ಇಲ್ಲದೇ 4 ಲಕ್ಷ 50. ಸಾವಿರ ಹಣ ಪತ್ತೆಯಾಗಿದೆ. ಹಣ ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟಪ್ರಭಾದ ವಿಶ್ವನಾಥ ಕುಲ್ಲೋಳಿ ಹಾಗೂ ಇಟ್ನಾಳದ ಶಿವಲಿಂಗಪ್ಪ ದೇಸನೂರ ಅವರಿಗೆ ಸೇರಿದ ವಾಹನದಲ್ಲಿ ಹಣ ಪತ್ತೆಯಾಗಿವೇ. ಮೂಡಲಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸಮೀರವಾಡಿಯಿಂದ ಮೂಡಲಗಿ ಕಡೆ ಬರುತ್ತಿರುವ ವಾಹನದಲ್ಲಿ ಎರಡು ಲಕ್ಷ ಹಾಗೂ ಮಹಾಲಿಂಗಪೂರದಿಂದ ಘಟಪ್ರಭಾ ಕಡೆ ಹೊರಟ ವಾಹನದಲ್ಲಿ 2 ಲಕ್ಷ .50 ಸಾವಿರ ಒಟ್ಟು 4ಲಕ್ಷ 50 ಸಾವಿರ ಹಣವನ್ನು ಜಪ್ತಿ ಮಾಡಿ ಕೇಸು ದಾಖಲಿಸಿ ಮುಂದಿನ ತಣಿಕೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮೂಡಲಗಿ ಗ್ರೇಡ 2 ತಹಶಿಲ್ದಾರರ ಶಿವಾನಂದ ಬಬಲಿ. ಪೋಲಿಸ ವೃತ್ತ ನೀರಿಕ್ಷಕ ಶ್ರೀಶೈಲ ಬ್ಯಾಕೂಡ ಜಾಗೃತಿ ಪಡೆಯ ಅಧಿಕಾರಿಗಳು ಇದ್ದರು.