ನಾನು ಬಿಜೆಪಿ‌ ಪಕ್ಷದ ಶಿಸ್ತಿನ ‌ಸಿಪಾಯಿ: ಸುನೀಲ್ ವಲ್ಲಾಪುರೆ

ಕಲಬುರಗಿ
Advertisement

ಕಲಬುರಗಿ: ಬಿಜೆಪಿ‌ ಪಕ್ಷದ ಶಿಸ್ತಿನ ‌ಸಿಪಾಯಿ ಆಗಿದ್ದು, ನನ್ನ ಕೊನೆ ಉಸಿರು ಇರುವರೆಗೂ ಬಿಜೆಪಿಯಲ್ಲಿ ಉಳಿಯುವೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಲಾಪುರೆ ಸ್ಪಷ್ಟಪಡಿಸಿದರು. ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬಿಟ್ಟು ಬೇರೆ ಪಕ್ಚಕ್ಕೆ ಹೋಗುವ ಪ್ರಶ್ನೆ ಉದ್ಬವಿಸಿಲ್ಲ ಎಂದು ಪುನರುಚ್ಚಿಸಿದರು. ಚಿಂಚೋಳಿ ಮತ್ತು ಚಿತ್ತಾಪುರ ಕ್ಷೇತ್ರದಿಂದ ಬೇರೆ ಪಕ್ಷದಿಂದ‌ ಆಹ್ವಾನ ಬಂದಿದ್ದರೂ ತಿರಸ್ಕರಿಸಿದೆ ಎಂದರು. ಆದರೆ ನಾನೂ ಚಿತ್ತಾಪುರ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಇಲ್ಲಿ ಹನ್ನೊಂದು ಜನ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂದರು.