ದಾಖಲೆ ಇಲ್ಲದ ೫೩ ಲಕ್ಷ ವಶಕ್ಕೆ

Advertisement

ಧಾರವಾಡ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ೫೩ ಲಕ್ಷ ಹಣವನ್ನು ಗರಗ ಠಾಣೆ ಪೊಲೀಸರು ವಶಕ್ಕೆ‌ ಪಡೆದಿದ್ದಾರೆ.
ಸಂಜು ಹಿರೇಮಠ ಎಂಬುವವರು ತಮ್ಮ ಇನ್ನೋವಾ ವಾಹನದಲ್ಲಿ ಬೆಳಗಾವಿಯಿಂದ‌ ಹಾವೇರಿ ಜಿಲ್ಲೆ ತಡಸಕ್ಕೆ ೫೩ ಲಕ್ಷ ನಗದನ್ನು ತೆಗೆದುಕೊಂಡು ಹೋಗುತ್ತಿದ್ದರು.
ಸಮೀಪದ ತೇಗೂರು ಬಳಿಯ ಚೆಕ್ ಪೋಸ್ಟನಲ್ಲಿ ತಪಾಸಣೆ ನಡೆಸಿದಾಗ ಯಾವುದೇ ದಾಖಲೆ‌ ಇಲ್ಲದಿರುವುದು ಗೊತ್ತಾಗಿದೆ.
ತಕ್ಷಣ ಗರಗ ಠಾಣೆ ಪೊಲೀಸರು ವಾಹನ ಮತ್ತು ಹಣವನ್ನು ವಶಕ್ಕೆ‌ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.