ಮುರುಘಾ ಶ್ರೀಗಳು ಪೀಠವನ್ನು ತ್ಯಜಿಸಬೇಕು

Advertisement

ಮಂಡ್ಯ: ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿರುವ ಬಗ್ಗೆ ಬಿಜೆಪಿ ಮುಖಂಡ ಹೆಚ್​.ವಿಶ್ವನಾಥ್​ ಪ್ರತಿಕ್ರಿಯಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಅಂದರೆ ಅದು ಗುರುಪರಂಪರೆ. ನಮಗೆ ಗುರುಗಳು ದೇವರಿದ್ದಂತೆ. ಮುರುಘಾ ಮಠ ಬಹಳ ಗೌರವಯುತ ಮಠ. ಸ್ವಾಮಿಗಳು ಅಂತಹ ಮಠಕ್ಕೆ ಅಗೌರವ ತೋರಬಾರದು. ಗುರುಗಳು ತಾತ್ಕಾಲಿಕವಾಗಿ ಪೀಠವನ್ನು ತ್ಯಜಿಸಬೇಕು. ಆ ಮೂಲಕ ಮಠದ ಗೌರವ ಕಾಪಾಡಿ. ತನಿಖೆಯಾದ ನಂತರ ದೋಷಮುಕ್ತರಾಗಿ ಬಂದು ಮೇಲೆ ಪೀಠ ಅಲಂಕರಿಸಿ ಎಂದು ಒತ್ತಾಯಿಸಿದ್ದಾರೆ.