ಚಿತ್ರದುರ್ಗ : ಮುರುಘಾ ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೋ ಕಾಯ್ದೆಯಡಿ ಲೈಂಗಿಕ ಕಿರುಕುಳ ದೂರು ದಾಖಲಾಗಿ ಐದು ದಿನ ಕಳೆದರು ಕೂಡ ಸ್ವಾಮೀಜಿಯವರನ್ನು ಬಂಧಿಸದೆ ಪೊಲೀಸರು ಹಾಗೂ ಸರ್ಕಾರ ಸ್ವಾಮೀಜಿಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದು ದಲಿತ ಯುವ ಮುಖಂಡರು ಹಾಗೂ ಯುವಕರು ಸರ್ಕಾರಿ ಬಾಲಕಿಯರ ಬಾಲಮಂದಿರದ ಮುಂಭಾಗದಲ್ಲಿ ಇಂದು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಕಳೆದ ಶುಕ್ರವಾರ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಲೈಂಗಿಕ ಕಿರುಕುಳ ದೂರಿನ ಜೊತೆಗೆ ಜಾತಿ ನಿಂದನೆ ದೂರು ಕೂಡ ದಾಖಲು ಮಾಡಲಾಗಿದೆ. ಆದರೂ ಕೂಡ ಪೊಲೀಸರು ಸ್ವಾಮೀಜಿ ಅವರನ್ನು ಬಂಧಿಸದೇ ಇರುವುದು ಹಲವಾರು ಸಂಶಯಗಳನ್ನು ಹುಟ್ಟಿಸಿದೆ. ಸ್ವಾಮೀಜಿಯವರು ಮಠದ ಪೀಠಾಧಿಪತಿಗಳು ಹಾಗೂ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷಿಗಳನ್ನು ನಾಶ ಮಾಡಬಲ್ಲವರು ಎಂದು ತಿಳಿಸಿದಿದ್ದರು ಕೂಡ ಪೊಲೀಸರು ಅವರನ್ನು ಬಂಧಿಸದೆ ಮೀನಾಮೇಷ ಏಣಿಸುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ದೂರಿದ್ದಾರೆ.
ಸಮಾಜದಲ್ಲಿ ಲೈಂಗಿಕ ಕಿರುಕುಳದ ದೂರ ಸಾಮಾನ್ಯ ಜನರ ವಿರುದ್ಧ ದಾಖಲಾಗದರೆ ತತಕ್ಷಣ ಪೊಲೀಸರು ಅವರನ್ನು ಬಂಧಿಸುತ್ತಿದ್ದರು. ಆದರೆ ಸ್ವಾಮೀಜಿಗಳನ್ನು ಏಕೆ ಬಂಧಿಸಿಲ್ಲ. ಸಾಮನ್ಯ ಜನರಗೆ ಒಂದು ಕಾನೂನು, ಸ್ವಾಮೀಜಿಗಳಿಗೆ ಒಂದು ಕಾನೂನು ಇದೇಯಾ ಎಂದು ಪ್ರಶ್ನಿಸಿದರು.
ಕಲಂ 164 ರ ಅಡಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕೆಂದು ಕಾನೂನಿನಲ್ಲಿ ಇದ್ದರೂ ಕೂಡ ಸ್ವಾಮೀಜಿಯನ್ನು ಬಂಧಿಸಿಲ್ಲ. ದೌರ್ಜನ್ಯಕ್ಕೊಳಗಾಗಿರುವ ಬಾಲಕಿಯರನ್ನು ಐದಾರೂ ಭಾರೀ ವಿಚಾರಣೆ ಮಾಡಿರುವ ಪೊಲೀಸರು ಸ್ವಾಮೀಜಿಗಳನ್ನು ಏಕೆ ಇದುವರೆಗೂ ವಿಚಾರಣೆಗೊಳಪಡಿಸಿಲ್ಲ ಎಂದು ಪ್ರಶ್ನಿಸಿರುವ ದಲಿತ ಸಂಘಟನೆ ಕಾರ್ಯಕರ್ತರು ಇಂದು ಸ್ವಾಮೀಜಿಯವರನ್ನು ಬಂಧಿಸದಿದ್ದರೆ. ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಹೋರಾಟ ಸಮಿತಿಯ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.