ಧಾರವಾಡ ಪೇಡೆ ಮತ್ತೆ ಮತ್ತೆ ಸವಿಯಬೇಕು ಎನಿಸುತ್ತೆ

modi
Advertisement

ಧಾರವಾಡ ಪೇಡೆ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಒಮ್ಮೆ ಈ ಧಾರವಾಡ ಪೇಡೆ ಸವಿದರೆ ಸಾಕು ಮತ್ತೆ ಮತ್ತೆ ಸವಿಯಬೇಕು ಎನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿರುವ ಅವರು, ನಮ್ಮ ಸ್ನೇಹಿತ ಪ್ರಲ್ಹಾದ ಜೋಶಿ ಅವರು ನನ್ನ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಮಾಡುತ್ತಾರೆ ಎಂದು ನಗೆ ಉಕ್ಕಿಸಿದ ಪ್ರಧಾನಿ ಮೋದಿ, ಜೋಶಿ ಅವರು ಒಂದು ದೊಡ್ಡ ಗಾತ್ರದ ತಟ್ಟೆ ತುಂಬಾ ಧಾರವಾಡ ಪೇಡೆಯನ್ನು ನಿಮ್ಮೆಲ್ಲರ ಪ್ರೀತಿಯ ಧ್ಯೋತಕವಾಗಿ ಕೊಟ್ಟಿದ್ದಾರೆ. ಆದರೆ, ಅದು ಪ್ಯಾಕ್‌ ಮಾಡಿ ಕೊಟ್ಟಿದ್ದಾರೆ ಇಲ್ಲದಿದ್ದರೆ ತಿನ್ನುತ್ತಿದ್ದೆ ಎಂದು ನಗೆ ಚಟಾಕಿ ಹಾರಿಸಿದರು.