ಮಹಿಳಾ ಮೀಸಲಾತಿ ಮಸೂದೆ: ಜಂತರ್‌ಮಂತರ್‌ನಲ್ಲಿ ಕೆ.ಕವಿತಾ ಉಪವಾಸ ಸತ್ಯಾಗ್ರಹ

ಕವಿತಾ
Advertisement

ನವದೆಹಲಿ : ಇಂದಿನ ಸತ್ಯಾಗ್ರಹ ಕೇವಲ ಆರಂಭ ಮಾತ್ರವಾಗಿದ್ದು, ದೇಶಾದ್ಯಂತ ಪ್ರತಿಭಟನೆ ಮುಂದುವರಿಯಲಿವೆ ಎಂದು ಬಿಆರ್‌ಎಸ್ ನಾಯಕಿ ಕೆ. ಕವಿತಾ ಹೇಳಿದರು. ಜಂತರ್ ಮಂತರ್ ನಲ್ಲಿ ನಡೆದ ಧರಣಿಯಲ್ಲಿ ಮಾತನಾಡಿದ ಅವರು ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಈ ಮಸೂದೆಯನ್ನು ತರುವುದು ಮುಖ್ಯವಾಗಿದೆ ಎಂದು ಯೆಚೂರಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಭಾರತ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅದಕ್ಕಾಗಿ ಕಳೆದ 27 ವರ್ಷಗಳಿಂದ ಬಾಕಿ ಇರುವ ಈ ಮಸೂದೆ ಜಾರಿಗೊಳಿಸುವುದು ಮುಖ್ಯವಾಗಿದೆ ಎಂದು ಕವಿತಾ ಹೇಳಿದರು.


ದೆಹಲಿ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವ ಒಂದು ದಿನ ಮುಂಚೆ ಕವಿತಾ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದು ಗಮನಾರ್ಹವಾಗಿದೆ. ಕವಿತಾ ಅವರ ಹೇಳಿಕೆಯು ರಾಜಕೀಯ ಮಹತ್ವ ಪಡೆದುಕೊಂಡಿದೆ. ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಎಲ್ಲ ವಿರೋಧ ಪಕ್ಷಗಳನ್ನು ಜತೆಗೂಡಿಸಬೇಕು ಎಂದು 2019ರಿಂದಲೇ ಪ್ರಯತ್ನ ಆರಂಭಿಸಿರುವ ಕೆ ಚಂದ್ರಶೇಖರ್ ರಾವ್, ಅದರಿಂದ ಕಾಂಗ್ರೆಸ್ ಅನ್ನು ದೂರವೇ ಇರಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ದೇಶಕ್ಕೆ ವಿಫಲ ಆಡಳಿತ ನೀಡಿವೆ ಎಂದು ಅವರು ಆರೋಪಿಸಿದ್ದಾರೆ.