ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಖಾಸಗಿ ಶಾಲೆಯಾದ ನ್ಯಾಷನಲ್ ಸ್ಕೂಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹಶಿಕ್ಷಕಿಯೊಬ್ಬರು ತನ್ನ ಪತಿ ಹಾಗೂ ಅತ್ತೆ, ಮಾವಂದಿರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಮನನೊಂದು ಶಾಲೆಯ ಕೊಠಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಲಾ ಕೊಠಡಿಯಲ್ಲೇ ವಿಷಸೇವಿಸಿ ಶಿಕ್ಷಕಿ ಬಸಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ವರ್ಷಗಳ ಹಿಂದೆ ಬಸಮ್ಮ ಹಾಗೂ ಅರ್ಜುನ್ ಪ್ರೀತಿಸಿ ಮದುವೆಯಾಗಿದ್ದರು. ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಆದರೆ, ಈಗಾಗಲೇ ಹಲವು ಬಾರಿ ವರದಕ್ಷಿಣೆ ಹಣವನ್ನು ತಂದುಕೊಟ್ಟಿದ್ದರೂ ಮನೆಯಲ್ಲಿ ಕಿರುಕುಳ ನೀಡುವುದನ್ನು ಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಯ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾನುವಾರ ಶಾಲೆ ರಜಾ ದಿನವಾದರೂ ತನಗೆ ಕೆಲಸವಿದೆ ಎಂದು ಶಾಲೆಗೆ ತೆರಳಿದ್ದಾರೆ. ಆದರೆ, ತನಗೆ ಪರೀಕ್ಷೆಯ ಕುರಿತು ಕೆಲಸವಿದೆ ಎಂದು ಹೇಳಿಕೊಂಡು ಶಾಲೆಗೆ ಆಗಮಿಸಿದ್ದಾರೆ. ಈ ವೇಳೆ ಶಾಲೆಯ ಕೊಠಡಿಯಲ್ಲಿಯೇ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಪತಿ ಅರ್ಜುನ್ ಪರಶೆಟ್ಟಿ, ಅತ್ತೆ ಅಂಬಿಕಾ ಪರಶೆಟ್ಟಿ, ನಾದಿನಿ ಸಂಗೀತಾ ಸೇರಿದಂತೆ 6 ಜನರ ವಿರುದ್ಧ ಹೂವಿನಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೂ ಮುನ್ನ ಬಸಮ್ಮ ಡೆತ್ ನೋಟ್ ಬರೆದಿಟ್ಟು, ಡೆತ್ ನೋಟ್ ಆಧರಿಸಿ ಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ ಪೊಲೀಸರು ತನಿಖೆ ನಡೆಸಿದ್ದಾರೆ.