ಟ್ವಿಟರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಟ್ವಿಟರ್ ಬಳಕೆದಾರರು ತೊಂದರೆ ಅನುಭವಿಸುವಂತಾಗಿದೆ.
ಜಗತ್ತಿನಾದ್ಯಂತ ಟ್ವಿಟರ್ ಡೌನ್ ಆಗಿದ್ದು, ಪ್ರೋಫೈಲ್ ಓಪನ್ ಮಾಡಿದ ತಕ್ಷಣ ʻಟ್ವಿಟ್ಟರ್‌ಗೆ ಸುಸ್ವಾಗತ!ʼ ಎನ್ನುವ ಸಂದೇಶವನ್ನು ನೀಡಲಾಗುತ್ತಿದೆ. ಹೀಗಾಗಿ ಹಳೆ ಬಳಕೆದಾರರು ಕೂಡ ಈ ಸಂದೇಶದಿಂದ ಆಶ್ಚರ್ಯಗೊಂಡಿದ್ದಾರೆ. ಟ್ವಿಟರ್ ಸಮಸ್ಯೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಬಳಕೆದಾರರು ದೂರುಗಳನ್ನು ದಾಖಲಿಸಿದ್ದಾರೆ.