ಹೋಗುತ್ತಿದ್ದ ಜೀವ ಮರಳಿ ತಂದ ಪೊಲೀಸ್..!‌ ಮಾನವೀಯತೆಗೆ ಹೊಸ ಭಾಷ್ಯ ಬರೆದ ಆರಕ್ಷಕ

Advertisement

ನಡುರಸ್ತೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಗೆ ಟ್ರಾಫಿಕ್‌ ಪೊಲೀಸ್‌ ಒಬ್ಬರು ತಕ್ಷಣವೇ ಸಿಪಿಆರ್‌ ನೀಡುವ ಮೂಲಕ ಜೀವವನ್ನು ಉಳಿಸಿದ ಘಟನೆ ತೆಲಂಗಾಣದಲ್ಲಿ ನಡೆಯಲಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಬಾಲರಾಜು ಎನ್ನುವ ವ್ಯಕ್ತಿಗೆ ಹೃದಯಾಘಾತವಾಗಿ ಸಡನ್‌ ಆಗಿ ಕುಸಿದು ಬಿದ್ದಿದ್ದರು. ಇದನ್ನು ಕಂಡಿದ್ದ ಸೈಬರಾಬಾದ್‌ನ ರಾಜೇಂದ್ರನಗರ ಟ್ರಾಫಿಕ್‌ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ರಾಜಶೇಖರ್, ಅವರಿಗೆ ಹೃದಯಾಘಾತವಾಗಿದೆ ಎನ್ನುವುದನ್ನು ಅರಿತುಕೊಂಡು ತಕ್ಷಣವೇ ಸಿಪಿಆರ್‌ ನೀಡುವ ಮೂಲಕ ಜೀವವನ್ನು ಉಳಿಸಿದ್ದಾರೆ.
ಯುವಕನ ಜೀವವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್‌ ರಾಜಶೇಖರ್‌ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.