ಡಾ. ರಾಜ್ ಮಾದರಿಯಲ್ಲೇ ನೇತ್ರದಾನ ಮಾಡಿದ ಹಿರಿಯ ನಿರ್ದೇಶಕ ಭಗವಾನ್

Advertisement

ರಾಜಕುಮಾರ್ ಅವರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ ಸಂದರ್ಭದಲ್ಲೇ ಭಗವಾನ್ ಕೂಡ ತಮ್ಮ ಹೆಸರನ್ನು ನೋಂದಾಯಿಸಿದ್ದರಂತೆ. ಹಾಗಾಗಿ ಇಂದು ಅವರ ಮರಣಾನಂತರ ಕಣ್ಣಿನ ಕಾರ್ನಿಯಾವನ್ನು ತೆಗೆಯಲಾಗಿದೆ. ನಾರಾಯಣ ನೇತ್ರಾಲಯದ ಐ ಬ್ಯಾಂಕ್ ಮ್ಯಾನೇಜರ್ ವೀರೇಶ್ ಕಣ್ಣು ತೆಗೆದ ನಂತರ ಮಾತನಾಡಿ, ‘ಭಗವಾನ್ ಅವರ ಕಾರ್ನಿಯಾ ಆರೋಗ್ಯವಾಗಿದೆ. ಕಣ್ಣಿಗೆ ಯಾವುದೇ ಸಮಸ್ಯೆ ಇರಲಿಲ್ಲವಾದ್ದರಿಂದ ನಾಲ್ಕೈದು ಜನರಿಗೆ ದೃಷ್ಟಿ ಸಿಗಬಹುದು’ ಎಂದಿದ್ದಾರೆ.