ಸಚಿವ ಅಶ್ವತ್ಥನಾರಾಯಣ ಕ್ಷಮೆಯಾಚಿಸಬೇಕು: ಬಯ್ಯಾಪುರ

Advertisement

ಕುಷ್ಟಗಿ:ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿದ್ದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಕೂಡಲೇ ಸಿದ್ದರಾಮಯ್ಯನವರಿಗೆ ಕ್ಷಮೆ ಯಾಚಿಸಬೇಕಾಗುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು,ರಾಜ್ಯ ಸರಕಾರದ ಪ್ರಬಲ ಸಚಿವರಾಗಿ ಜನರಿಗೆ ಪ್ರಚೋದನೆ ನೀಡುವ ಕೆಲಸ ಮಾಡಬಾರದ ಇತ್ತು ಮಾತಿನ ಅಬ್ಬರದಲ್ಲಿ ಈ ರೀತಿಯಾಗಿ ಮಾತನಾಡುವುದು ಸೂಚನೆಯ ಸಂಗತಿಯಾಗಿದೆ. ರಾಜಕಾರಣಿಗಳಾದವರು ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಿದರೆ ಒಳ್ಳೆಯದಾಗುತ್ತದೆ. ಸಚಿವ ಅಶ್ವಥ್ ನಾರಾಯಣ ಅವರು ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದರು.

ಗೌರವಿತವಾಗಿ ಮಾತನಾಡಬೇಕು: ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಸಿದ್ದರಾಮಯ್ಯನವರಿಗೆ ಯಾವ ಉದ್ದೇಶದಿಂದ ಮಾತನಾಡಿದ್ದಾರೋ ಅಥವಾ ಬಾಯಿ ತಪ್ಪಿ ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.ಪ್ರತಿಯೊಬ್ಬರಿಗೂ ಕೂಡ ಗೌರವ ಕೊಡಬೇಕು ಮತ್ತು ಗೌರವಿತವಾಗಿ ಮಾತನಾಡಬೇಕು.ಸಿದ್ದರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂದು ಗ್ರಾಮೀಣ ಜನರು ಸಹ ಮಾತನಾಡುವುದಿಲ್ಲ. ಸಚಿವರು ಹೇಳಿಕೆಯನ್ನು ನಾನು ಬಲವಾಗಿ ಕಂಡನೆ ಮಾಡುತ್ತೇನೆ ಎಂದರು.