3 ವರ್ಷಗಳ ನಂತ್ರ ಒಂದೇ ವೇದಿಕೆಯಲ್ಲಿ HD ಕುಮಾರಸ್ವಾಮಿ ಹಾಗೂ G.T. ದೇವೇಗೌಡ ಕಾಣಿಸಿಕೊಂಡಿದ್ದು, ಮೈಸೂರಿನಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ದಳಪತಿಗಳು ಗುಸು ಗುಸು ಮಾತನಾಡಿದ್ದಾರೆ. ಜಿ.ಟಿ.ದೇವೇಗೌಡ ಮೂರು ವರ್ಷಗಳಿಂದ ದೂರ ಸರಿದಿದ್ದರು. ಇತ್ತೀಚಿನ ದಿನಗಳಲ್ಲಿ ಜೆಡಿಎಸ್ಗೆ ಹತ್ತಿರವಾಗುತ್ತಿದ್ದಾರೆ. ನಾಯಕರು ಅಕ್ಕಪಕ್ಕ ಕೂತು ಸುದೀರ್ಘ ಚರ್ಚೆ ನಡೆಸಿದರು.