ದೆಹಲಿ : ಚೀತಾಗಳನ್ನು ಕಾಡಿಗೆ ಬಿಟ್ಟು ನಮೋ ಸಂದೇಶ ನೀಡಿದ್ದು, 70 ವರ್ಷಗಳ ಹಿಂದೆ ಚೀತಾ ಸಂತತಿ ಅಳಿದಿತ್ತು, ಮತ್ತೆ ಈ ಸಂತತಿಯನ್ನು ಕನೆಕ್ಟ್ ಮಾಡುವ ಪುಣ್ಯ ನನಗೆ ಸಿಕ್ಕಿದೆ ಎಂದು ಹುಟ್ಟು ಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ಧಾರೆ.
ಈ ಮೂಲಕ ಭಾರತದ ಪರಿಸರ ಕಾಳಜಿ ಮತ್ತೆ ಸಾಬೀತಾಗಿದೆ. ಈ ಐತಿಹಾಸಿಕ ದಿನದಂದು ನಮೀಬಿಯಾ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ. ನಮೀಬಿಯಾ ಸರ್ಕಾರದ ಸಹಕಾರ ಇಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರದ ಅಧಿಕಾರಿಗಳೂ ಇದಕ್ಕೆ ಶ್ರಮಿಸಿದ್ದಾರೆ. ಚೀತಾ ಯೋಜನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುವೆ ಎಂದು ಸಂದೇಶ ನೀಡಿದ್ಧಾರೆ.