ಬಳ್ಳಾರಿ: ಕೌಲ್ ಬಜಾರ್ ಠಾಣೆಯ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಐವರನ್ನು ಬಂಧಿಸಿ, 27.50 ಲಕ್ಷ ರೂ ರೂ ಬೆಲೆ ಬಾಳುವ 55 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಚೈನ್ ಲಿಂಕ್ ಮಾದರಿಯಲ್ಲಿ ಬಳ್ಳಾರಿಯಿಂದ ಆಂಧ್ರದವರೆಗೂ ಟ್ರ್ಯಾಕ್ ಮಾಡುವ ಮೂಲಕ ಐವರು
ಆರೋಪಿಗಳನ್ನು ಬಂಧಿಸಿದ್ದಾಗಿ ತಿಳಿಸಿದ್ದಾರೆ.
ಮೊದಲಿಗೆ ಹಳೇ ಬೈಪಾಸ್ ರಸ್ತೆಯಲ್ಲಿ ಜಾಗೃತಿನಗರ ಬ್ರಿಡ್ಜ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಮೊಹಮದ್ ಮುಜಾಕೀರ್(22), ಎಸ್.ರಿಜ್ವಾನ್ (22) ಇವರನ್ನು ಬಂಧಿಸಿ ಇವರಿಂದ 40 ಸಾವಿರ ಬೆಲೆ ಬಾಳುವ 525 ಗ್ರಾಂ ಗಾಂಜಾ ಮತ್ತು ಒಂದು ಬೈಕ್ ವಶಪಡಿಸಿಕೊಳ್ಳಲಾಗಿತ್ತು.
ಇವರಿಗೆ ಗಾಂಜಾ ಎಲ್ಲಿಂದ ಬರುತ್ತಿತ್ತು ಎನ್ನುವ ತನಿಖೆ ಮುಂದುವರಿಸಿದಾಗ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆರ್.ಅಮೀರ್ (23), ಆಲೂರಿನ ಬಿ.ಅರವಿಂದ್ ಸೂರ್ಯ ನಾರಾಯಣ (21) ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದರು.
ಬಂಧಿತ ಆರೋಪಿಗಳು ನೀಡಿ ಮಾಹಿತಿಯ ಮೇರೆಗೆ ಸಂತೆ ಕೂಡ್ಲೂರು ಗ್ರಾಮದ ಪ್ರಮುಖ ಆರೋಪಿ ಎಸ್.ರವಿ (29) ಎನ್ನುವವರನ್ನು ಬಂಧಿಸಿ ವಿಚಾರಿಸಿದಾಗ ಆತನ ಮನೆಯಲ್ಲಿ 27.50 ರೂ ಬೆಲೆಬಾಳುವ ಅಂದಾಜು 55 ಕೆ.ಜಿ ಗಾಂಜಾ ದೊರೆತಿದೆ. ಇನ್ನೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸರು ಮತ್ತಷ್ಟು ಅಳವಾಗಿ ವಿಚಾರಣೆ ನಡೆಸಿದ್ದಾರೆ.