500ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗೆ ಆಹುತಿ

ಖಾನಪುರ್‌
Advertisement

ಉತ್ತರ ಪ್ರದೇಶದ ಕಾನ್ಪುರದ ಬನ್ಸ್ಮಂಡಿಯ ಹಮ್ರಾಜ್ ಮಾರುಕಟ್ಟೆ ಬಳಿಯ ಎಆರ್ ಟವರ್ನಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಎಆರ್ ಟವರ್ ಹಾಗೂ ಮಸೂದ್ ಕಾಂಪ್ಲೆಕ್ಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸುತ್ತಮುತ್ತಲಿನ ಕಟ್ಟಡಗಳಿಗೂ ವ್ಯಾಪಿಸಿದೆ. ಈ ಭೀಕರ ಬೆಂಕಿಯಲ್ಲಿ ಕನಿಷ್ಠ 500 ಅಂಗಡಿಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದವರು ಎಆರ್ ಟವರ್ ಕಟ್ಟಡದಿಂದ ಸಿಕ್ಕಿಬಿದ್ದ ಎಲ್ಲ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಎರಡು ಡಜನ್ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿದವು. ರಕ್ಷಣಾ ಕಾರ್ಯಾಚರಣೆ ಆರು ಗಂಟೆಗೂ ಹೆಚ್ಚು ಕಾಲ ನಡೆಯಿತು. ಬಲವಾದ ಗಾಳಿಯಿಂದಾಗಿ ಬೆಂಕಿಯ ಜ್ವಾಲೆಗಳು ಪಕ್ಕದ ಮಾರುಕಟ್ಟೆ ಮತ್ತು ಕಟ್ಟಡಗಳಿಗೆ ವ್ಯಾಪಿಸಿವೆ. ಪೀಡಿತ ಪ್ರದೇಶಗಳಲ್ಲಿ ಮಸೂದ್ ಟವರ್ 1, ಮಸೂದ್ ಟವರ್ 2 ಮತ್ತು ಹಮ್ರಾಜ್ ಕಾಂಪ್ಲೆಕ್ಸ್ ಕೂಡ ಸೇರಿವೆ. ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಂಗಡಿಕಾರರು ಅಳಲು ತೋಡಿಕೊಂಡಿದ್ದಾರೆ. ಹಮ್ರಾಜ್ ಮಾರುಕಟ್ಟೆಯಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಪ್ರಸ್ತುತ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕಟ್ಟಡದಲ್ಲಿ ಯಾರೂ ಸಿಲುಕಿಲ್ಲ. ಸೇನಾ ವಾಹನಗಳ ಜೊತೆಗೆ ಲಕ್ನೋದಿಂದ ಹೈಡ್ರಾಲಿಕ್ ಫೈರ್ ಟೆಂಡರ್‌ಗಳನ್ನು ಕರೆಸಲಾಯಿತು ಮತ್ತು ಹತ್ತಿರದ ಜಿಲ್ಲೆಗಳಿಂದ ಅಗ್ನಿಶಾಮಕ ವಾಹನಗಳನ್ನು ಸಹ ಕರೆಯಲಾಯಿತು. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಕಾರಣವನ್ನು ತಿಳಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ಮತ್ತೊಂದೆಡೆ, ಬೆಂಕಿಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಆಡಳಿತ ಪಡೆ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಕಾನ್ಪುರ ನಗರ ಜಂಟಿ ಪೊಲೀಸ್ ಆಯುಕ್ತ (ಜೆಸಿಪಿ) ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.