ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಬುಧವಾರ ಪಾಲಿಕೆ ಆಗಮಿಸಿ ನಾಮಪತ್ರ ಸಲ್ಲಿಸಿ 50 ಸಾವಿರ ಮತಗಳ ಅಂತರದಿಂದ ಜಯಗಳಿಸುತ್ತೇನೆ ಎಂದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ೫೦ ಸಾವಿರ ಮತ ಅಂತರದಿಂದ ಏಳನೇ ಬಾರಿ ಜಯಗಳಿಸುತ್ತೇನೆ. ಜನರ ನಾಡಿ ಮಿಡಿತ ಬಗ್ಗೆ ನನಗೆ ಸರಿಯಾಗಿ ಗೊತ್ತಿದೆ ಎಂದರು.
ಪಕ್ಷದಿಂದ ನನ್ನ ಹೊರ ಹಾಕುವ ಕೆಲಸ ಬಿಜೆಪಿ ಮಾಡಿದೆ. ಅದಕ್ಕೆ ಜನ ತಕ್ಕ ಉತ್ತರ ನೀಡುತ್ತಾರೆ. ರಾಜ್ಯದ ಜನ, ಹುಬ್ಬಳ್ಳಿಯ ಜನ ನನ್ನ ಕಾರ್ಯಗಳ ಬಗ್ಗೆ ಗೊತ್ತಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಹೇಳಿಕೆ ಪಕ್ಷದಲ್ಲಿ ಹಿಂದೆ ಏನಾಗಿದೆ ಎಂಬುದು ಎಲ್ಲವೂ ತಿಳಿದಿದೆ. ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಇನ್ನೂ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಮಾತನಾಡಿ, ಸೆಂಟ್ರಲ್ ಕ್ಷೇತ್ರದಲ್ಲಿ ಕಾರ್ಯಕರ್ತ ದೊಡ್ಡ ಬಳಗವಿದೆ. ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಅಷ್ಟೇ ಹಿರಿಯರಾದ ಜಗದೀಶ ಶೆಟ್ಟರ ಅವರ ಆಶೀರ್ವಾದ ಸಹ ನಾನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಡೆದಿದ್ದೇನೆ ಎಂದರು.