ನವದೆಹಲಿ: ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗವು ಪ್ರಕಟಿಸಿದೆ.
ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ಈ ಐದು ರಾಜ್ಯಗಳಲ್ಲಿನ ಶಾಸಕಾಂಗ ಸಭೆಗಳ ಅವಧಿಯು ಡಿಸೆಂಬರ್ 2023 ಮತ್ತು ಜನವರಿ 2024ರ ನಡುವೆ ಮುಕ್ತಾಯಗೊಳ್ಳಲಿದೆ. ಮಿಜೋರಾಂನ ಶಾಸಕಾಂಗ ಸಭೆಯ ಅವಧಿಯು ಈ ವರ್ಷ ಡಿಸೆಂಬರ್ 17 ರಂದು ಕೊನೆಗೊಳ್ಳುತ್ತದೆ. ಇಲ್ಲಿ ಪ್ರಸ್ತುತ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರದಲ್ಲಿದೆ. ತೆಲಂಗಾಣ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಶಾಸಕಾಂಗ ಸಭೆಗಳ ಅವಧಿಯು ಮುಂದಿನ ವರ್ಷದ ಜನವರಿಯಲ್ಲಿ ಹಲವು ದಿನಾಂಕಗಳಲ್ಲಿ ಕೊನೆಯಾಗಲಿದೆ.
ಯಾವ ರಾಜ್ಯದಲ್ಲಿ ಎಂದು ನಡೆಯಲಿದೆ ಚುನಾವಣೆ?
ಮಧ್ಯಪ್ರದೇಶ : ನವೆಂಬರ್ 17ರಂದು ಮತದಾನ
ರಾಜಸ್ಥಾನ : ನವೆಂಬರ್ 23ರಂದು ಮತದಾನ
ಛತ್ತೀಸ್‌ಗಢ : ನವೆಂಬರ್ 7 ಮತ್ತು 17ರಂದು ಮತದಾನ
ತೆಲಂಗಾಣ : ನವೆಂಬರ್ 30ರಂದು ಮತದಾನ
ಮಿಜೋರಾಂ : ನವೆಂಬರ್ 7ರಂದು ಮತದಾನ
🗳️🗳️ ಡಿಸೆಂಬರ್ 3 2023 ರಂದು ಎಲ್ಲಾ ಐದು ರಾಜ್ಯಗಳ ಚುನಾವಣಾ ಫಲಿತಾಂಶ.