ಧಾರವಾಡ: ಸೂಕ್ತ ದಾಖಲಾತಿಗಳಿಲ್ಲದೇ ಬಸ್ಸಿನಲ್ಲಿ ಸಾಗಿಸುತ್ತಿದ್ದ 44 ಲಕ್ಷ ರೂಪಾಯಿ ಮೌಲ್ಯದ 710 ಗ್ರಾಂ ತೂಕದ ಚಿನ್ನಾಭರಣಗಳನ್ನು ಧಾರವಾಡ ಗರಗ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಧಾರವಾಡ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರ ತೇಗೂರು ಚೆಕ್‌ಪೋಸ್ಟ್‌ನಲ್ಲಿ ಈ ಚಿನ್ನ ವಶಕ್ಕೆ ಪಡೆದಿರುವ ಪೊಲೀಸರು, ರಮೇಶ ನಾಯಕ್ ಎಂಬಾತ ಬೆಳಗಾವಿಯಿಂದ ಧಾರವಾಡಕ್ಕೆ ಬಸ್ಸಿನ ಮೂಲಕ ಈ ಚಿನ್ನಾಭರಣ ಸಾಗಿಸುತ್ತಿದ್ದ.
ಈ ವೇಳೆ ತೇಗೂರು ಚೆಕ್‌ಪೋಸ್ಟ್ ಬಳಿ ಪೊಲೀಸರು ಬಸ್ ಚೆಕ್ ಮಾಡಿದಾಗ ದಾಖಲೆಗಳಿಲ್ಲದೇ ಚಿನ್ನಾಭರಣ ಸಾಗಿಸುತ್ತಿರುವದು ಗಮನಕ್ಕೆ ಬಂದಿದೆ. ಹೀಗಾಗಿ ಆ ವ್ಯಕ್ತಿ ಹಾಗೂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ತೆರಿಗೆ ಇಲಾಖೆ, ಪೊಲೀಸ್ ಇಲಾಖೆ ಸೇರಿ ಈ ಚಿನ್ನದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.