ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಗೌರಿ ಸಿನಿಮಾಕ್ಕೆ ಮುಹೂರ್ತ ಆದ ಬಳಿಕ ನಟ ವಿ. ರವಿಚಂದ್ರನ್ ಮಾತನಾಡಿದರು. ಇಡೀ ಸಿನಿಮಾದ ಶೂಟಿಂಗ್ ದಾಂಡೇಲಿ ಅರಣ್ಯದಲ್ಲಿ ನಡೆಯಲಿದೆ ಅಂತಾ ಹೇಳಿದರು. ಇದೀಗ ಅನೀಶ್ ಎಸ್ ಅವರ ಚೊಚ್ಚಲ ನಿರ್ದೇಶನದ ಗೌರಿ ಚಿತ್ರದಲ್ಲಿ ನಟಿಸಲಿದ್ದಾರೆ. ಎನ್.ಎಸ್. ರಾಜ್‌ಕುಮಾರ್ ನಿರ್ಮಾಣದ ಈ ಚಿತ್ರವು ಕ್ರೇಜಿ ಸ್ಟಾರ್ ಜೊತೆ ಅವರ ಮೂರನೇ ಸಿನಿಮಾವಾಗಿದೆ. ಡಿಸೆಂಬರ್ 20 ರಿಂದ ದಾಂಡೇಲಿಯಲ್ಲಿ ಚಿತ್ರೀಕರಣ ಶುರುವಾಗಲಿದೆ.