2000 ರೂ.ನೋಟು ಅಮಾನ್ಯ ವದಂತಿ: ಸಂಸದ ಮೋದಿ

2000 RS
Advertisement

ಶೀಘ್ರದಲ್ಲೇ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಲಾಗುವುದೆಂಬ ವದಂತಿ ಹರಡುತ್ತಿದೆ ಎಂದು ರಾಜ್ಯಸಭೆ ಸದನದ ಶೂನ್ಯ ವೇಳೆಯಲ್ಲಿ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಪ್ರಸ್ತಾಪ ಮಾಡಿದರು.
ಈಗಾಗಲೇ ದೇಶದ ಬಹುತೇಕ ಎಟಿಎಂಗಳಿಂದ 2 ಸಾವಿರ ರೂ. ಮುಖಬೆಲೆಯ ನೋಟುಗಳು ಕಣ್ಮರೆಯಾಗಿದೆ. ಹೀಗಾಗಿ ಸರ್ಕಾರ ಈ ವಿಚಾರವಾಗಿ ದೇಶದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ ಸುಶೀಲ್ ಕುಮಾರ್ ಮೋದಿ, ಭಾರತೀಯ ರಿಸರ್ವ್ ಬ್ಯಾಂಕ್ ಮೂರು ವರ್ಷಗಳ ಹಿಂದೆಯೇ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಿದೆ ಎಂಬ ಮಾಹಿತಿಯನ್ನೂ ನೀಡಿದರು. ಸುಶೀಲ್ ಕುಮಾರ್ ಮೋದಿ, 1 ಸಾವಿರ ರೂ. ಮುಖಬೆಲೆಯ ನೋಟನ್ನು ಸರ್ಕಾರ ರದ್ದು ಮಾಡಿದ ಬಳಿಕ, ಅದಕ್ಕೂ ಹೆಚ್ಚಿನ ಮುಖಬೆಲೆಯ 2 ಸಾವಿರ ರೂ. ನೋಟನ್ನು ಪರಿಚಯಿಸುವ ಅಗತ್ಯ ಏನಿತ್ತು? ಈ ನಿರ್ಧಾರದ ಹಿಂದೆ ಇರುವ ಲಾಜಿಕ್ ಏನು ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೆ ಅಭಿವೃದ್ಧಿ ಹೊಂದಿದ ದೇಶಗಳು ಯಾವುದೇ ಕಾರಣಕ್ಕೂ ಅತಿ ಹೆಚ್ಚು ಮುಖಬೆಲೆಯ ಕರೆನ್ಸಿ ನೋಟುಗಳನ್ನು ಹೊಂದಿಲ್ಲ ಎಂಬ ವಿಚಾರ ಸದನದ ಗಮನಕ್ಕೆ ತಂದರು.