ಪಣಜಿ: ಬೆಳ್ಳಿತೆರೆಯ ಮೂಲಕ ಸಾಮಾಜಿಕ, ಭೌಗೋಳಿಕ ವಾಸ್ತವತೆಯನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನವು ನಡೆಯುತ್ತದೆ. ಅಂತಹ ಚಲನಚಿತ್ರಗಳಿಗೆ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಪೀಕಾಕ್' ಗೌರವ ನೀಡಲಾಗುತ್ತದೆ. ಈ ವರ್ಷ ಗೋಲ್ಡನ್ ಪೀಕಾಕ್ ಪ್ರಶಸ್ತಿ ಗೆದ್ದ ವಿಶ್ವದಾದ್ಯಂತದ ೧೫ ಚಲನಚಿತ್ರಗಳ ಪಟ್ಟಿಯಲ್ಲಿ
ಕಾಶ್ಮೀರ್ ಫೈಲ್ಸ್’ ಸೇರಿದಂತೆ ಇನ್ನೂ ಎರಡು ಭಾರತೀಯ ಚಲನಚಿತ್ರಗಳು ಸೇರಿವೆ.
53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನ. 20ರಿಂದ ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯಲಿದೆ. ತೀರ್ಪುಗಾರರಲ್ಲಿ ಇಸ್ರೇಲಿ ಬರಹಗಾರ ನಾದವ್ ಲ್ಯಾಪಿಡ್, ಅಮೆರಿಕೆಯ ಚಲನಚಿತ್ರ ನಿರ್ಮಾಪಕ ಜಿಂಕೊ ಗೊಟೊ, ಫ್ರೆಂಚ್ ಚಲನಚಿತ್ರದ ಪಾಸ್ಕಲ್ ಚವಾನ್ಸ್, ಫ್ರೆಂಚ್ ಕಿರುಚಿತ್ರ ತಯಾರಕ, ಚಲನಚಿತ್ರ ವಿಮರ್ಶಕ ಮತ್ತು ಪತ್ರಕರ್ತ ಕ್ಸೇವಿಯರ್ ಆಂಗ್ಲೋ ಬ್ರಾಟ್ರೇನ್ ಮತ್ತು ಭಾರತೀಯ ಚಲನಚಿತ್ರ ನಿರ್ದೇಶಕ ಸುದೀಪ್ತೋ ಸೇನ್ ಇದ್ದಾರೆ. ಕಾಶ್ಮೀರ ಫೈಲ್ಸ್ ಜೊತೆಗೆ ಮೂರು ಭಾರತೀಯ ಚಲನಚಿತ್ರಗಳಾದ ದಿ ಸ್ಟೋರಿಟೆಲರ್(2022) ಮತ್ತು ಕುರುಂಗು ಪೆಡಲ್(2022) ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್. ಮುರುಗನ್ ಗೋವಾ ರಾಜಧಾನಿ ಪಣಜಿಗೆ ಆಗಮಿಸಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪೂರ್ವಸಿದ್ಧತಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು. ನಲ್ಲಿನ ಮಾಸ್ಟರ್ ಕ್ಲಾಸ್ ವಿಭಾಗವು ದೇಶ ಮತ್ತು ವಿದೇಶದ ಪ್ರಮುಖ ಸಂಯೋಜಕರು, ನಿರ್ದೇಶಕರು, ನಿರ್ಮಾಪಕರು ಅಥವಾ ಇತರ ಅಂಶಗಳನ್ನು ಒಳಗೊಂಡಿದೆ. ಈ ವರ್ಷ, ಈ ವಿಭಾಗದಲ್ಲಿ, ಪ್ರಸಿದ್ಧ ಸಂಗೀತಗಾರ ಎ.ಆರ್. ರೆಹಮಾನ್, ಮಣಿರತ್ನಂ, ಶೇಖರ್ ಕಪೂರ್, ಅನುಪಮ್ ಖೇರ್, ಪಂಕಜ್ ತ್ರಿಪಾಠಿ, ನವಾಜುದ್ದೀನ್ ಸಿದ್ದಿಕಿ ಮತ್ತು ಪ್ರಸೂನ್ ಜೋಶಿ ಭಾಗವಹಿಸಲಿದ್ದಾರೆ.