ಹೊಸ ಕಟ್ಟಡ ಭಾರತೀಯ ರೈಲ್ವೆ ವಿನೂತನ ಕಲ್ಪನೆ ಅಡಿ `ಬಯೋಫಿಲಿಕ್ ವಾಸ್ತುಶಿಲ್ಪ’ ಆಧರಿಸಿ ನಿರ್ಮಿಸಲಾಗಿದೆ. ಧಾರವಾಡದ ಸಂಸ್ಕಂತಿಯೊಂದಿಗೆ ಆಧುನಿಕ ವಾಸ್ತುಶಿಲ್ಪ ಸಂಯೋಜಿಸಲಾಗಿದೆ. ಆಕರ್ಷಕ ಉದ್ಯಾನ, ಪ್ರವೇಶದ್ವಾರ, ಜ್ಞಾನಪೀಠ ಪುರಸ್ಕೃತ ಕರ್ನಾಟಕದ ಸಾಹಿತಿಗಳ ಫೋಟೋಗಳು ಮತ್ತು ಪರಿಚಯ, ಟಿಕೆಟ್ ಬುಕ್ಕಿಂಗ್ ಕೌಂಟರ್ ಹಾಗೂ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಗೋಡೆಗಳ ಮೇಲೆ ಸ್ಥಳೀಯ, ಉತ್ತರ-ದಕ್ಷಿಣ ಕರ್ನಾಟಕ ಕಲೆಗಳನ್ನು ಭಿಂಬಿಸುವ ಮುರಾಲ್ ಚಿತ್ರಕಲೆ ಮನಸಿಗೆ ಮುದ ನೀಡುವಂತಿದೆ.