ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಕ್ರೆಡಿಟ್ ವಾರ್ ಮತ್ತೇ ಮುಂದುವರೆದಿದೆ.
ಕಳೆದ ದಿ. 2 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕೃತವಾಗಿ ರಾಜಹಂಸಗಡದ ಶಿವಾಜಿ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು, ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಚ್ಮೀ ಹೆಬ್ಬಾಳಕರ ಗೈರು ಹಾಜರಾಗಿದ್ದರು.
ಈಗ ಅದೇ ಶಿವಾಜಿ ಮೂರ್ತಿಯನ್ನು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಮತ್ತೊಮ್ಮೆ ಲೋಕಾರ್ಪಣೆ ಮಾಡುವ ಕೆಲಸವನ್ನು ಶಾಸಕಿ ಹೆಬ್ಬಾಳಕರ ಮಾಡಿದರು, ಈ ಕಾರ್ಯಕ್ರಮಕ್ಕೆ ಬರಬೇಕಾಗಿದ್ದ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದರು.
ಭಗವಾ ಧ್ವಜ ಹಿಡಿದು ಕುಣಿತ.
ರಾಜಹಂಸಗಡದಲ್ಲಿ ಎರಡನೇ ಬಾರಿ ಲೋಕಾರ್ಪಣೆಗೊಳ್ಳುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಳೆದ ದಿ. 4 ರಂದು ಶಾಸಕಿ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಪುತ್ರ ಮೃನಾಲ ಹೆಬ್ಬಾಳಕರ ಅವರು ಕೈಯ್ಯಲ್ಲಿ ಭಗವಾ ಧ್ವಜ ಹಿಡಿದು ಜೈ ಶಿವಾಜಿ, ಜೈ ಭವಾನಿ ಎನ್ನುತ್ತ ಕುಣಿದು ಕುಪ್ಪಳಿಸಿದರು. ಇಡೀ ರಾಜಹಂಸಗಡವನ್ನು ಕೇಸರಿಮಯ ಮಾಡಲಾಗಿತ್ತು.
ಕೇಸ್ ಹಾಕಿದ್ದರಂತೆ..!
ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ನನ್ನ ಮೇಲೆ ಪ್ರಕರಣ ದಾಖಲಿಸಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ನನಗೆ ಕೊಡಬಾರದಷ್ಟು ಕಷ್ಟ ಕೊಡುತ್ತಿದ್ದಾರೆ.ಬೇರೆಯವರು ಮುಖ್ಯಮಂತ್ರಿಗಳ ದಿಕ್ಕು ತಪ್ಪಿಸಿ ಶಿವಾಜಿ ಮೂರ್ತಿಯನ್ನು ಲೋಕಾರ್ಪಣೆ ಮಾಡಿಸಿದ್ದಾರೆಂದರು.
ಲಾತೂರ್ ಶಾಸಕ ಧೀರಜ್ ದೇಶಮುಖ ಮಾತನಾಡಿ, ಐತಿಹಾಸಿಕ ಶಿವಾಜಿ ಮೂರ್ತಿ ಉದ್ಘಾಟನೆ ಮಾಡಿರುವುದು ಐತಿಹಾಸಿಕ ಕ್ಷಣ. ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಡಿ.ಕೆ.ಶಿವಕುಮಾರ ಅವರು ರಾಜಹಂಸಗಡದಲ್ಲಿ ಬೃಹತ್ ಶಿವಾಜಿ ಮೂರ್ತಿ ನಿರ್ಮಾಣ ಮಾಡಲು ಅನುದಾನ ನೀಡಿ ಚಾಲನೆ ನೀಡಿದ್ದರು ಎಂದರು,
ಕೊಲ್ಲಾಪುರ ಕಾಂಗ್ರೆಸ್ ಶಾಸಕ ಸತೇಜ್ ಪಾಟೀಲ ಮಾತನಾಡಿ,. ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೆ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡದೆ ಇರುವುದು ವಿಪಯರ್ಾಸದ ಸಂಗತಿ ಎಂದರು. ಈ ವೇಳೆ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಸೇರಿದಂತೆ ಅನೇಕರು ಇದ್ದರು.