ಲಕ್ಷ್ಮೇಶ್ವರ: ಸ್ವಾತಂತ್ರ್ಯದ ಅಮೃತ ಮಹೋತ್ಸವವವನ್ನು ದೇಶದೆಲ್ಲೆಡೆ ಉತ್ಸಾಹದಿಂದ ಆಚರಿಸಲಾಗುತ್ತಿದ್ದು, ಎಲ್ಲೇಡೆ ದೇಶಭಕ್ತಿಯನ್ನು ಬಿತ್ತರಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಪಟ್ಟಣದಲ್ಲಿ ಎಬಿವಿಪಿ ಸಂಘಟನೆಯವರು ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ೧೫೦ ಮೀಟರ್ ಉದ್ದದ ತಿರಂಗಾ ಭವ್ಯ ಮೆರವಣಿಗೆ ಕೈಗೊಂಡಿದ್ದು, ಪಟ್ಟಣದಲ್ಲಿ ಒಂದು ರೀತಿಯ ಸಂಚಲನವನ್ನು ಉಂಟು ಮಾಡಿತ್ತು.
ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬಿಸಿಎನ್ ಪಿಯು ಕಾಲೇಜಿನಿಂದ ಪ್ರಾರಂಭವಾದ ಬೃಹತ್ ತ್ರಿವರ್ಣ ಧ್ವಜದ ಭವ್ಯ ಮೆರವಣಿಗೆ ಎಪಿಎಂಸಿ, ಪಂಪ ಸರ್ಕಲ್, ವಿದ್ಯಾರಣ್ಯ ಸರ್ಕಲ್, ಹಾವಳಿ ಆಂಜನೇಯ ದೇವಸ್ಥಾನ, ಮುಖ್ಯ ಬಜಾರ ರಸ್ತೆ, ಶಿಗ್ಲಿ ಸರ್ಕಲ್ ಮೂಲಕ ಸಾಗಿ ಹೊಸ ಬಸ್ ನಿಲ್ದಾಣದ ಹತ್ತಿರ ಸಂಪನ್ನಗೊಂಡಿತು.