ಮಂಡ್ಯ: ಅಭ್ಯರ್ಥಿಗಳ ಆಯ್ಕೆ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಈ ಕುರಿತು ಮಂಡ್ಯ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಟಿಕೆಟ್ ಸಿಗುವ ಬಗ್ಗೆ 100% ಅಲ್ಲ 500 ರಷ್ಟು ವಿಶ್ವಾಸವಿದೆ, ಇನ್ನೆನ್ನೋ ಎಂಪಿ ಟರ್ಮ್ ಮುಗಿಯುದ್ದು, ಚುನಾವಣಾ ನೀತಿ ಸಂಹಿತೆ ಬಂದರೆ ಅನುದಾನವೆಲ್ಲಾ ವೇಸ್ಟ್ ಆಗುತ್ತೆ. ಅನುದಾನವನ್ನು ಯೋಜನೆಗಳಿಗೆ ಬಳಸಿಕೊಳ್ಳಬೇಕು ಅನ್ನೋದು ನನ್ನ ಉದ್ದೇಶ, ಅಲ್ಲದೇ ನಾನು ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪ್ರೇರಣೆ ಎಂದಿದ್ದಾರೆ.