ಓಲಾ ಕಂಪನಿಯ ಇ-ಸ್ಕೂಟರ್ ʼಓಲಾ ಎಸ್1 ಪ್ರೋʼ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಗರಿಷ್ಠ ವೇಗದ ಮಿತಿಯನ್ನು ಇದು ಹೊಂದಿದೆ. ಪ್ರತಿ ಗಂಟೆಗೆ 115 ಕಿಮೀ ದೂರಕ್ಕೆ ಇದು ಚಲಿಸಬಲ್ಲದು.
3.97 ಕಿ.ವ್ಯಾ ಸಾಮರ್ಥ್ಯದ ಬ್ಯಾಟರಿಯೊಂದಿಗೆ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 181 ಕಿ.ಮೀ. ವರೆಗೆ ಪ್ರಯಾಣಿಸಬಹುದು. ಸದ್ಯ 10 ಬಣ್ಣಗಳಲ್ಲಿ ಇದು ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಅಂದಾಜು ಬೆಲೆ 1 ಲಕ್ಷ ರೂ. ಆಗಬಹುದೆಂದು ಹೇಳಲಾಗಿದೆ.
