🏏 ನಾಳೆಯಿಂದ ʻಸಹಾರಾʼ ಕಪ್ 🏆

Advertisement

ಮೈಸೂರು: ಮಹಿಳಾ ಕ್ರಿಕೆಟ್ ಆಧರಿತ ಸಹಾರಾ ಸಿನಿಮಾ ಇದೇ ಜೂ. 7 ರಂದು ರಾಜ್ಯದಾದ್ಯಂತ ತೆರೆಕಾಣಲಿದೆ.
ಮಂಡ್ಯದ ಹುಡುಗಿಯೊಬ್ಬಳು ಕ್ರಿಕೆಟ್ ಆಟಗಾರ್ತಿ ಆಗುವ‌ ಕನಸನ್ನು ಕಾಣುತ್ತಾಳೆ. ಆ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ಆಕೆಗೆ ಕೆಲವು ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನು ಮೀರಿ‌ ಆಕೆ ಸಾಧನೆಯ ಮೆಟ್ಟಿಲು ಏರುತ್ತಾಳೆ. ಈ ಎಲ್ಲ ವಿವರಗಳನ್ನು ಎಳೆ ಎಳೆಯಾಗಿ ತೆರೆದಿಡಲಿದೆ ‘ಸಹಾರಾ’ ಸಿನಿಮಾ. ಹೀಗಾಗಿ ಜನತೆ ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಚಿತ್ರದ ನಾಯಕಿ ನಟಿ ಸಾರಿಕಾ ರಾವ್ ಮನವಿ ಮಾಡಿದ್ದಾರೆ. ಇನ್ನು ಭಾರತ ತಂಡದ ಮಾಜಿ ಆಟಗಾರ ಡೇವಿಡ್ ಜಾನ್ಸ್ ಸುನಿಲ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಂಜೇಶ್ ಭಗವತ್ ಚಿತ್ರದ ನಿರ್ಮಾಣದ ಜೊತೆಗೆ ಆಕ್ಸನ್‌ ಕಟ್‌ ಹೇಳಿದ್ದಾರೆ. ನಂಜನಗೂಡಿನ ಕಳಲೆ ಗ್ರಾಮ ಮತ್ತು ನಗರದ ಸುತ್ತಮುತ್ತ ಚಿತ್ರೀಕಣರ ನಡೆದಿದೆ. ಇನ್ನು ಚಿತ್ರದ ಟ್ರೇಲರ್‌ಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಚಿತ್ರದ ಮೊದಲ ಸಿಂಗಲ್ ‘ಒಂದೂ ಶಕ್ತಿಯು’ ಅನ್ನು ಬಿಡುಗಡೆ ಮಾಡಿದ್ದಾರೆ.

ಜೂನ್ 7 ರಂದು ರಾಜ್ಯದಾದ್ಯಂತ ತೆರೆಗೆ ಬರಲು ಸಿದ್ಧವಾಗಿರುವ ʻಸಹಾರಾʼ ಚಿತ್ರದ ಒಂದೂ ಶಕ್ತಿಯು ಎಂಬ ಪ್ರೇರಣೆ ಹಾಡನ್ನು ನೀವೊಮ್ಮೆ ಕೇಳಿ…