ನರಗುಂದ: ರಾಮಜನ್ಮ ಭೂಮಿ ಆಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣವಾಗಬೇಕು ಎಂದು ಐದು ಶತಮಾನಗಳಿಂದ ಭಾರತೀಯರು ಜಪ ತಪ ಪೂಜೆ ಪುನಸ್ಕಾರ ಮಾಡುತ್ತ ಬಂದಿದ್ದಾರೆ.
ನರಗುಂದ ಪಟ್ಟಣದ ದಂಡಾಪುರದ ೭೧ ವರ್ಷದ ಶ್ರೀರಾಮ ಭಕ್ತರಾದ ರಾಮಭಟ್ಟ ಪುರೋಹಿತ ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡಬೇಕು ಮತ್ತು ಲೋಕಕಲ್ಯಾಣಾರ್ಥ ೫೪ ವರ್ಷದಿಂದ (೧೯೭೦ರಿಂದ) ಪ್ರತಿನಿತ್ಯ ಶ್ರೀರಾಮ ರಕ್ಷಾ ಸ್ತೋತ್ರ ದಿನಕ್ಕೆ ೨೨ ಬಾರಿ ಹನುಮಾನ ಚಾಲೀಸ್ ಹಾಗೂ ದಿನವೊಂದಕ್ಕೆ ೧೩ ಸಾವಿರ ಶ್ರೀರಾಮ ಜಪ ಮಾಡುತ್ತ ಬಂದಿದ್ದಾರೆ.
ಇವಾಗ ರಾಮಮಂದಿರ ನಿರ್ಮಾಣಗೊಂಡಿದೆ. ರಾಮಲಲಾನ ಪ್ರಾಣ ಪ್ರತಿಷ್ಠಾಪಣೆ ಜ.೨೨ ರಂದು ನಡೆಯುತ್ತದೆ. ಇಲ್ಲಿಯವರೆಗೆ ೨೫ ಕೋಟಿ ೬೦ ಲಕ್ಷ ೫೦ ಸಾವಿರ ಶ್ರೀರಾಮ ಜಯರಾಮ ಜಯ ಜಯ ರಾಮ ಸ್ತೋತ್ರ ಹೇಳುತ್ತ ಬಂದಿದ್ದಾರೆ. ರಾಮಭಟ್ಟರು ೧೯೮೬ರಲ್ಲಿ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಚೈತನ್ಯಾಶ್ರಮದ ಶ್ರೀದತ್ತಾ ಅವಧೂತರ ಹಾಗೂ ಸಂಗಡಿಗರೊಂದಿಗೆ ಆಯೋಧ್ಯೆಗೆ ತೆರಳಿ ವಿವಾದಿತ ಕಟ್ಟಡದಲ್ಲಿ ಸ್ಥಾಪನೆಗೊಂಡಿದ್ದ ಶ್ರೀರಾಮ ಲಲ್ಲಾನ ಆವರಣದಲ್ಲಿ ನೂರಾರು ಸಾಧು ಸಂತರೊಂದಿಗೆ ಸೇರಿಕೊಂಡು ಶ್ರೀರಾಮ ಭಜನೆ ಮಾಡಿದ್ದೇನೆ ಎನ್ನುತ್ತಾರೆ.