೨೯ರಂದು ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ
Advertisement

ಧಾರವಾಡ: ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಾ ೯ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ. ೨೯ರಂದು ದಿ. ಸಿದ್ದಲಿಂಗ ದೇಸಾಯಿ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕಾ ಕಸಾಪ ಅಧ್ಯಕ್ಷೆ ಡಾ. ಶರಣಮ್ಮ ಗೊರೇಬಾಳ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಲೀಲಾ ಕಲಕೋಟಿ ಅವರನ್ನು ಆಯ್ಕೆ ಮಾಡಲಾಗಿದೆ. ಜ. ೨೯ರ ಮುಂಜಾನೆ ೮.೩೦ಕ್ಕೆ ಮುಮ್ಮಿಗಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟç, ನಾಡ ಹಾಗೂ ಪರಿಷತ್ ಧ್ವಜಾರೋಹಣ ನೆರವೇರಿಸಲಾಗುವುದು. ಬಳಿಕ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಿ.ಎಂ. ಕೆಂಗಾರ ಹಾಗೂ ತಂಡದವರಿAದ ಧ್ವಜ ವಂದನೆ ಕಾರ್ಯಕ್ರಮ ಜರುಗಲಿದೆ. ನಂತರ ಕನ್ನಡಾಂಬೆಯ ಪೂಜೆ ಮಾಡಲಾಗುವುದು ಎಂದರು.
೯ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾಗೂ ಕನ್ನಡಕ್ಕಾಗಿ ನಡಿಗೆ ಜರುಗಲಿದ್ದು, ತಹಶೀಲ್ದಾರ ಸಂತೋಷ ಹಿರೇಮಠ ಅವರು ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಎಸ್.ಎನ್. ಗೌಡರ, ಬಸವ್ವ ಭಜಂತ್ರಿ ಹಾಗೂ ಚಂದ್ರಪ್ಪ ಕೊಮಾರ ಆಗಮಿಸಲಿದ್ದಾರೆ. ಮೆರವಣಿಗೆಯಲ್ಲಿ ಪೂರ್ಣಕುಂಭ, ಕರಡಿ ಮಜಲು, ಡೊಳ್ಳು, ಸಂತರ ದಿಂಡಿ, ಎತ್ತಿನ ಬಂಡಿಗಳು, ಹೆಜ್ಜೆ ಮೇಳ, ಭಜನಾ ತಂಡಗಳು ಹಾಗೂ ಶಾಲಾ ಮಕ್ಕಳ ವೇಷಭೂಷಣ ತಂಡಗಳು ಪಾಲ್ಗೊಳ್ಳಲಿವೆ ಎಂದರು.
೧೦.೩೦ಕ್ಕೆ ಹಿರಿಯ ಸಾಹಿತಿ ಡಾ. ಶಾಂತಾ ಇಮ್ರಾಪೂರ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಆಶಯ ನುಡಿಗಳನ್ನಾಡಲಿದ್ದಾರೆ. ಗ್ರಾಮದ ಪರಿಚಯವನ್ನು ಡಾ. ಸಂಜಯಕುಮಾರ ಹಾರೋಬಿಡಿ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ ಲೀಲಾ ಕಲಕೋಟಿ ಭಾಗವಹಿಸಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಿಂಗಣ್ಣ ಕುಂಟಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ನಂತರ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ಜರುಗಲಿವೆ. ಸಂಜೆ ೪ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಸಂವಾದದಲ್ಲಿ ಡಾ. ಶಶಿಧರ ನರೇಂದ್ರ, ಲಲಿತಾ ಕೆರಿಮನಿ, ಶಂಕರ ಹಲಗತ್ತಿ, ಡಾ. ಬಸವರಾಜ ಹೊಂಗಲ್, ಡಾ. ವೀಣಾ ಸಂಕನಗೌಡರ, ಸಿದ್ದರಾಮ ಹಿಪ್ಪರಗಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಸಂಜೆ ೫ಕ್ಕೆ ನಡೆಯುವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ. ಕೆ.ಆರ್. ದುರ್ಗಾದಾಸ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕಿ ಸೀಮಾ ಮಸೂತಿ, ಡಾ. ಶ್ರೀಶೈಲ ಹುದ್ದಾರ, ಕೆ.ಎಸ್. ಕೌಜಲಗಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.