ಹ್ಯಾಟ್ರಿಕ್ ಸಾಧನೆ ಇತಿಹಾಸ ಸೃಷ್ಟಿಸಿದೆ

Advertisement

ಧಾರವಾಡ: ಪೂರ್ವ ಕ್ಷೇತ್ರದಲ್ಲಿ ನನ್ನ ಹ್ಯಾಟ್ರಿಕ್ ಗೆಲುವು ಕ್ಷೇತ್ರದ ಜನರ ಗೆಲುವು. ಸ್ವಾತಂತ್ರ್ಯ ನಂತರ ಈ ಕ್ಷೇತ್ರದಲ್ಲಿ ಯಾರೂ ಹ್ಯಾಟ್ರಿಕ್ ಸಾಧನೆ ಮಾಡಿರಲಿಲ್ಲ. ಈಗ ನನ್ನ ಗೆಲುವಾಗಿದೆ. ಇದು ಮತದಾರರ ಪ್ರೀತಿ, ನಾನು ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಲಭಿಸಿದ ಪ್ರತಿಫಲ ಎಂದರು.
ಬಿಜೆಪಿ, ಎಐಎಂಐಎಂ ಪಕ್ಷಗಳು ನನ್ನನ್ನು ಸೋಲಿಸಬೇಕು ಎಂದು ಮಾಡಬಾರದ ಎಲ್ಲ ತಂತ್ರಗಳನ್ನು ಮಾಡಿದರು. ಬಿಜೆಪಿಯವರು ಹಣದ ಹೊಳೆಯನ್ನೇ ಹಂಚಿದರು. ಎಐಎಂಐಎಂ, ಎಸ್ಡಿಪಿಐ ಸೇರಿದಂತೆ ಅನೇಕರು ನನ್ನ ಗೆಲುವಿಗೆ ಅಡ್ಡಗಾಲಾಗಲು ಯತ್ನಿಸಿದರುಮ ಆದರೆ, ಜಾಗೃತ ಮತದಾರ ನನ್ನ ಕೈ ಹಿಡಿದು ಗೆಲ್ಲಿಸಿದ್ದಾನೆ. ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನನ್ನ ಲೆಕ್ಕಾಚಾರಷ ಪ್ರಕಾರ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ನನ್ನ ಗೆಲುವು ಆಗಬೇಕಿತ್ತು. 34 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ ಎಂದರು.
ಹ್ಯಾಟ್ರಿಕ್ ಗೆಲುವು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯಾಗಬೇಕು. ಸಚಿವ ಸ್ಥಾನ ಪಕ್ಷದ ನಾಯಕರು ನಿರ್ಧರಿಸುತ್ತಾರೆ ಎಂದು ಹೇಳಿದರು.