ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹೊಸ ವಾಹನ ಖರೀದಿ ಮಾಡುವವರಿಗೆ ತೆರಿಗೆ ಹೊರೆ ಬೀಳಲಿದೆ.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ ೨೦೨೪ಕ್ಕೆ ರಾಜ್ಯಪಾಲರ ಅನುಮೋದನೆ ಸಿಕ್ಕಿದೆ. ಈ ಕುರಿತು ವಿಶೇಷ ರಾಜ್ಯಪತ್ರದಲ್ಲಿ ಆದೇಶ ಹೊರಡಿಸಲಾಗಿದೆ.
ಹೊಸ ಕಾನೂನಿಯ ಅನ್ವಯ ಹೊಸದಾಗಿ ಖರೀದಿ ಮಾಡಿ ನೋಂದಣಿ ಮಾಡುವ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಶೇ. ೩ರಷ್ಟು ಹೆಚ್ಚುವರಿ ಸೆಸ್ ವಿಧಿಸಲಿದೆ. ಅಲ್ಲದೇ ಎಲೆಕ್ಟಿçಕ್ ವಾಹನಗಳ ಮೇಲೆ ಆಜೀವ ತೆರಿಗೆಯನ್ನು ಸಹ ಪಾವತಿ ಮಾಡಬೇಕಿದೆ.
ಮೋಟಾರು ಕಾರು, ಜೀಪು, ಓಮಿನಿ ಬಸ್, ಖಾಸಗಿ ಸೇವೆ ವಾಹನಗಳು ವಿದ್ಯುತ್ ಮೂಲಕ ಓಡುತ್ತಿದ್ದರೆ ಅದರ ದರ ೨೫ ಲಕ್ಷಕ್ಕಿಂತ ಹೆಚ್ಚು ಇದ್ದರೆ ಶೇ. ೧೦ರಷ್ಟು ಲೈಫ್ ಟೈಮ್ ಟ್ಯಾಕ್ಸ್ ಪಾವತಿ ಮಾಡಬೇಕಿದೆ. ಕರ್ನಾಟಕ ಸರ್ಕಾರ ೨೦೧೬ರಲ್ಲಿ ಎಲ್ಲಾ ಎಲೆಕ್ಟ್ರಿಕ್ ವಾಹನಗಳು ತೆರಿಗೆ ಪಾವತಿ ಮಾಡುವುದರಿಂದ ವಿನಾಯಿತಿ ನೀಡಿತ್ತು. ರಸ್ತೆ ತೆರಿಗೆ ವಿನಾಯಿತಿ ಮತ್ತು ನೋಂದಣಿಗೆ ಸಹ ಶೂನ್ಯ ತೆರಿಗೆ ಘೋಷಣೆ ಮಾಡಿತ್ತು. ಸದ್ಯ ದೇಶದಲ್ಲಿಯೇ ಅತಿ ಹೆಚ್ಚು ಅಂದರೆ ಶೇ. ೧೩ ರಿಂದ ೨೦ರ ತನಕ ರಸ್ತೆ ತೆರಿಗೆ ಸಂಗ್ರಹ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ.