ಹೊಸರಿತ್ತಿಯ ಖ್ಯಾತ ಗಾಂಧಿವಾದಿ ಚನ್ನಮ್ಮ ಹಳ್ಳಿಕೇರಿ ಇನ್ನಿಲ್ಲ

Advertisement

ಬೆಂಗಳೂರು: ಹಾವೇರಿ ಜಿಲ್ಲೆಯ ಹೊಸರಿತ್ತಿಯ ಖ್ಯಾತ ಗಾಂಧಿವಾದಿ ಚೆನ್ನಮ್ಮ ಹಳ್ಳಿಕೇರಿ ನಿಧನರಾಗಿದ್ದಾರೆ.
ಅವರಿಗೆ 92 ವರ್ಷವಾಗಿತ್ತು. ಚನ್ನಮ್ಮ ಅವರು ವಿನೋಬಾ ಭಾವೆ ಮತ್ತು ಮಹಾತ್ಮಾ ಗಾಂಧೀಜಿ ಅವರೊಡನೆ ಭೂದಾನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಗಳೊಂದಿಗೆ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗಿಯಾಗಿ, ಜೈಲು-ವಾಸ ಅನುಭವಿಸಿದ್ದರು. ಚನ್ನಮ್ಮ ಅವರಿಗೆ ಕರ್ನಾಟಕ ಸರ್ಕಾರದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ 2016 ರಲ್ಲಿ ದೊರೆತಿತ್ತು. ಗಾಂಧೀಜಿಯವರ ಆಶಯ ಮತ್ತು ಆದರ್ಶಗಳಲ್ಲಿ ನಂಬಿಕೆಯಿಟ್ಟು ಅದನ್ನು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದ ಹಿರಿಯ ಜೀವದ ಅಗಲಿಕೆಯಿಂದ ನಾಡು ಬಡವಾಗಿದೆ ಎಂದು ಗಣ್ಯರು ಕಂಬನಿ ಮಿಡಿದಿದ್ದಾರೆ.