ದಾವಣಗೆರೆ: ನವೆಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ರೈತ ಸಮಾವೇಶ ನಡೆಸಲಾಗುವುದು ಎಂದು ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಸಮಾವೇಶದಲ್ಲಿ ಅಂದಾಜು ೧೦ ಲಕ್ಷಕ್ಕೂ ಹೆಚ್ಚು ರೈತರನ್ನು ಸೇರಿಸಿ ಐತಿಹಾಸಿಕ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುವುದು. ತಜ್ಞರ ವರದಿ ಪ್ರಕಾರ ಪ್ರಸ್ತುತ ರೈತರ ಆದಾಯ ಶೇ.೫೦ರಷ್ಟು ಹೆಚ್ಚಾಗಿದೆ.
ಭೂತಾನ್ ಅಡಕೆ ಆಮದು…
ದೇಶದಲ್ಲಿರುವ ಅಡಿಕೆ ಉತ್ಪನ್ನ, ಬೇಡಿಕೆ ಆಧಾರಿಸಿಯೇ ಕೇಂದ್ರ ಸರ್ಕಾರ ಭೂತಾನ್‌ನಿಂದ ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ದೇಸಿ ಅಡಕೆ ದರ ಇಳಿಕೆಯಾದರೆ, ತಕ್ಷಣವೇ ಕೇಂದ್ರ ಸರ್ಕಾರ ಆಮದು ನಿಲ್ಲಿಸಲು ಕ್ರಮ ತೆಗೆದುಕೊಳ್ಳಲಿದೆ. ಕಬ್ಬಿನ ಕಾರ್ಖಾನೆಗಳು ಇಳುವರಿ ಮತ್ತು ತೂಕದಲ್ಲಿ ಮಾಡುವ ಮೋಸವನ್ನು ತಡೆಯಲು ಸರ್ಕಾರ ಒತ್ತಾಯಿಸಲಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದಿಸುವ ಉಪ ಉತ್ಪನ್ನಗಳ ಲಾಭಾಂಶವನ್ನು ರೈತರಿಗೆ ಕೊಡಿಸುವ ಬಗ್ಗೆಯೂ ಸರ್ಕಾರಗಳಿಗೆ ಬೇಡಿಕೆ ಮಂಡಿಸಲಾಗಿದೆ ಎಂದರು.