ಟೆಹರಾನ್: ಹಿಜಾಬ್ ವಿರುದ್ಧ ಇರಾನ್ನಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ತಳೆದಿದ್ದು, ಈವರೆಗೆ 31 ಮಂದಿ ಬಲಿಯಾಗಿದ್ದಾರೆ. ಹಿಜಾಬ್ ಧರಿಸದ ಕಾರಣ ನೈತಿಕ ಪೊಲೀಸರ ಹಲ್ಲೆಯಿಂದ ಮಹಿಳೆಯೊಬ್ಬರು ಬಲಿಯಾದ ನಂತರ ಇರಾನ್ನಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಚಳವಳಿ ತೀವ್ರ ಸರೂಪ ಪಡೆದುಕೊಳ್ಳುತ್ತಿಂತೇ ಸರ್ಕಾರ ಫೇಸ್ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಅಂತರ್ಜಾಲದಲ್ಲಿ ನಿಷೇಧಿಸಿದೆ.