ಹಿಂದೂಗಳ ಹಿತದೃಷ್ಟಿಯಿಂದ ಚುನಾವಣೆಗೆ ಸಿದ್ಧ: ಪ್ರಮೋದ್ ಮುತಾಲಿಕ್

ಮುತಾಲಿಕ್‌
Advertisement

ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಹಿಂದುತ್ವಕ್ಕೆ ನ್ಯಾಯ ಕೊಡಿಸಲು ನಾನು ಸ್ವತಂತ್ರವಾಗಿ ಚುನಾವಣೆಗೆ ನಿಲ್ಲುವುದು ಖಚಿತ. ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ನಿರ್ಧರಿಸಬೇಕು. 5 ಕ್ಷೇತ್ರದಲ್ಲಿ ಸರ್ವೇ ನಡೆಯುತ್ತಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಇದನ್ನು ಸ್ಪಷ್ಟಪಡಿಸುವುದಾಗಿ ಪ್ರಮೋದ್ ಮುತಾಲಿಕ್​​ ತಿಳಿಸಿದರು.
25 ಹಿಂದೂವಾದಿಗಳು ಈ ಬಾರಿ ಕಣಕ್ಕೆ ಇಳಿಯುತ್ತಿದ್ದು, 25 ಸೀಟ್​ಗಳನ್ನು ಹಿಂದುತ್ವವಾದಿಗಳಿಗೆ ಕೊಡಬೇಕು ಅಂತ ಬಿಜೆಪಿಯಲ್ಲಿ ಕೇಳಿಕೊಂಡಿದ್ದೇವೆ. ಆದರೆ ಅವರು ಕೊಟ್ಟಿಲ್ಲ. ಹಾಗಾಗಿ ಸ್ವತಂತ್ರವಾಗಿ ಹಿಂದೂವಾದಿಗಳು ಚುನಾವಣಾ ಕಣಕ್ಕೆ ಇಳಿಯುತ್ತೇವೆ ಎಂದು ಇದೇ ವೇಳೆ ಮುತಾಲಿಕ್ ಹೇಳಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಮತಾಂತರ ಚಟುವಟಿಕೆ ನಡೆಯುತ್ತಿದೆ. ಕನಕಪುರ ತಾಲೂಕಿನ ಕಪಾಲಿ ಬೆಟ್ಟದಲ್ಲಿ ಎಲ್ಲೂ ಇಲ್ಲದ ಯೇಸು ಪ್ರತಿಮೆಯನ್ನು ಮಾಡಲು ಹೊರಟಿದ್ರು‌. ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು 116 ಅಡಿಯ ಯೇಸು ಪತ್ರಿಮೆ ಮಾಡಲು ಹೊರಟಿದ್ದಾರೆ. ಬಿಜೆಪಿ ಸರ್ಕಾರ ಏನು ಮಾಡುತ್ತಿದೆ. ಇಲ್ಲಿನ ಡಿಸಿ, ಎಸ್ಪಿ, ತಹಶೀಲ್ದಾರ್​, ರಾಜಕಾರಣಿಗಳ ಪರವಾಗಿ ಹಾಗೆ ಕೆಲಸ ಮಾಡುವುದನ್ನು ಬಿಟ್ಟು ಸಮಾಜದ ಒಳಿತಿಗಾಗಿ ಸೇವೆ ಮಾಡಬೇಕು. ರಾಮನಗರ ಎಸ್ಪಿ ಹತ್ತು ಬಾರಿ ಕರೆ ಮಾಡಿದ್ರೂ ಎಸ್ಪಿ ಫೋನ್ ತೆಗೆಯುವುದಿಲ್ಲ. ನಾಳೆ ಜಿಲ್ಲೆಯಲ್ಲಿ ಅನಾಹುತ ಆದ್ರೆ ಅದಕ್ಕೆ ನೀವೇ ಹೊಣೆ ಹೊರತು, ನಾವಲ್ಲ. ಹಾಗೆಯೇ ಈ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮತಾಂತರ ಆಗುತ್ತಿದೆ ಎನ್ನುವುದು ಪೊಲೀಸರಿಗೆ ಗೊತ್ತಿದೆ. ಈಗಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.