ಹಿಂದುಜಾ ಸಂಸ್ಥೆಯ ಚೇರ್ಮನ್​ ಎಸ್​.ಪಿ. ಹಿಂದುಜಾ ನಿಧನ

Advertisement

ನವದೆಹಲಿ: ಹಿಂದೂಜಾ ಸಮೂಹ ಸಂಸ್ಥೆಗಳ ಚೇರ್ಮನ್​ ಶ್ರೀಚಂದ್​ ಪರ್ಮಾನಂದ ಹಿಂದುಜಾ(87) ಲಂಡನ್​ನಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಭಾರತೀಯ ಮೂಲದ ಬ್ರಿಟನ್​ ಪ್ರಜೆಯಾಗಿದ್ದರು, ನಮ್ಮ ಕುಟುಂಬದ ಹಿರಿಯರಾದ ಮತ್ತು ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಎಸ್‌ಪಿ ಹಿಂದುಜಾ ಅವರ ನಿಧನವನ್ನು ಘೋಷಿಸಲು ತೀವ್ರ ಹೃದಯದಿಂದ ವಿಷಾದಿಸುತ್ತೇವೆ ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ.