ಹಾವೇರಿ ಲೋಕಸಭಾ ಕ್ಷೇತ್ರ: ಶೇ 8.62ರಷ್ಟು ಮತದಾನ

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಇಂದು ಧಾರವಾಡ ಲೊಕಸಭಾ ಕ್ಷೇತ್ರ ವ್ಯಾಪ್ತಿಯ ಶಿಗ್ಗಾವಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಜೊತೆಯಲ್ಲಿ ಅವರ ಪುತ್ರ ಭರತ ಬೊಮ್ಮಾಯಿ ಕೂಡ ಮತದಾನ ಮಾಡಿದರು.
Advertisement

ಹಾವೇರಿ: ಹಾವೇರಿ ಮತ್ತು ಗದಗ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಎರಡು ಗಂಟೆಯಲ್ಲಿ ಶೇ 8.62 ರಷ್ಟು ಮತದಾನವಾಗಿದೆ.

ಬ್ಯಾಡಗಿ – 9.15,
ಗದಗ- 9.60
ಹಾನಗಲ್- 9.19
ಹಾವೇರಿ – 8.86
ಹಿರೇಕೆರೂರು- 8.85
ರಾಣೆಬೆನ್ನೂರ-9.85
ರೋಣ -6.79
ಶಿರಹಟ್ಟಿ – 7.33
ಮತದಾನವಾಗಿದೆ.

ಬಿರು ಬಿಸಿಲ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ, ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಮತದಾರರಿಗೆ ನೆರಳು, ಕುಡಿಯುವ ನೀರು, ಅಂಗವಿಕಲರಿಗೆ ತ್ರಿಚಕ್ರ ವಾಹನ ವ್ಯವಸ್ಥೆ ಮಾಡಲಾಗಿದೆ.