ಉಡುಪಿ : ಕಳೆದ 24 ವರ್ಷದಿಂದ ಸತತವಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಕಣದಿಂದ ಹಿಂದಕ್ಕೆ ಸರಿದು, ರಾಜಕೀಯ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.
ಸೋಮವಾರ ಹಾಲಾಡಿಯ ಸ್ವಗೃಹದಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ತನ್ನ ಆಪ್ತರೊಂದಿಗೆ ಸ್ವತಃ ಶ್ರೀನಿವಾಸ ಶೆಟ್ಟಿ ಲ ಹಂಚಿಕೊಂಡಿದ್ದು ತನ್ನ ಆಪ್ತಮಿತ್ರ ಕಿರಣ್ ಕೊಡ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡುವುದಾದರೆ ತಾನು ಪಕ್ಷದ ಪರ ಕೆಲಸ ಮಾಡಲು ಸಿದ್ಧ. ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ತನಗೆ ಟಿಕೆಟ್ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆ ಉಡುಪಿ ಜಿಲ್ಲೆಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಮಂಗಳವಾರ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.