ಇಳಕಲ್ : ನಗರದ ಹಿರೇಹಳ್ಳದಲ್ಲಿ ಸೋಮವಾರದಂದು ಸಿಕ್ಕ ನವಜಾತ ಶಿಶುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡರು.
ಪತ್ರಿಕೆಯಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಮಗುವನ್ನು ತೆಗೆದುಕೊಂಡು ಹೋದ ಮಹಿಳೆಯ ಮನೆಗೆ ಹೋಗಿ ಮಗುವನ್ನು ವಶಕ್ಕೆ ಪಡೆಯಲು ಹೋದಾಗ ಮಹಿಳೆಯು ಮಗುವನ್ನು ಕೊಡಲು ನಿರಾಕರಿಸಿದಳು.
ಆಗ ಅನಿವಾರ್ಯವಾಗಿ ಪೋಲಿಸರನ್ನು ಸಂಪರ್ಕಿಸಿ ಮಹಿಳಾ ಪೇದೆಯನ್ನು ಕರೆಸಿದ ನಂತರ ಮಹಿಳೆ ಮಗುವನ್ನು ಇಲಾಖೆಯ ವಶಕ್ಕೆ ನೀಡಿದಳು ಎಂದು ಹೇಳಲಾಗಿದೆ. ನಂತರ ಮಗುವನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು ಅಲ್ಲಿಂದ ಮಗುವನ್ನು ಬಾಗಲಕೋಟೆ ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಲಾಯಿತು, ಇಲಾಖೆಯ ಅಧಿಕಾರಿಗಳಾದ ಬಾಗಲಕೋಟೆಯ ಕೇಶವದಾಸ ಸಿಡಿಪಿಒ ಗಿರಿ ತಮ್ಮಣ್ಣನವರ , ವಿಜಯಲಕ್ಷ್ಮಿ ಹಿರೇಮಠ ,ನೇತ್ರಾವತಿ ಬಡಿಗೇರ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು