ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವತಿ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಲಾಡಮುಗಳಿ ಹಳ್ಳದಲ್ಲಿ ಜರುಗಿದೆ.
ಕಮಲಾಪುರ ತಾಲೂಕಿನ ಬೆಳಕೋಟಾದ ದಾನೇಶ್ವರಿ(18) ಎಂಬಾಕೆ ಶವವಾಗಿ ಪತ್ತೆಯಾಗಿದ್ದಾಳೆ.
ಲಾಡಮುಗಳಿ ಗ್ರಾಮದ ಹೊರವಲಯದಲ್ಲಿರುವ ಹಳ್ಳದಲ್ಲಿ ತಾಯಿ ಜೊತೆ ಬಟ್ಟೆ ತೊಳೆಯಲು ತೆರಳಿದ್ದಾಗ ಹಳ್ಳದಲ್ಲಿ ಯುವತಿ ಕೊಚ್ಚಿ ಹೋಗಿದ್ದಳು. ಶುಕ್ರವಾರ ಮಧ್ಯಾಹ್ನದಿಂದ ಎನ್ ಡಿ ಆರ್ ಎಫ್ ,ಅಗ್ನಿಶಾಮಕ , ಪೊಲೀಸ್ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಸಿ ಶವ ಪತ್ತೆ ಮಾಡಿದ್ದಾರೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.