ಹಳಿ ತಪ್ಪಿದ ರೈಲು: ಪ್ರಯಾಣಿಕರಿಗೆ ಬಸ್ ವ್ಯವಸ್ಥೆ

Advertisement

ಹುಬ್ಬಳ್ಳಿ: ಕೊಪ್ಪಳ ಜಿಲ್ಲೆ ಕಾರಟಗಿ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ಮಧ್ಯಾಹ್ನ ಯಶವಂತಪುರ- ಕಾರಟಗಿ ಎಕ್ಸಪ್ರೆಸ್ ರೈಲು ಹಳಿ ತಪ್ಪಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಹಳಿ ದುರಸ್ತಿ ಕಾರ್ಯ ನಡೆದಿದ್ದು, ಪ್ರಯಾಣಿಕರು ತಾವು ತೆರಳಬೇಕಾದ ಸ್ಥಳಕ್ಕೆ ತೆರಳಲು ಗಂಗಾವತಿ ಮತ್ತು ಕಾರಟಗಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.
ರೈಲ್ವೆ ನಿಲ್ದಾಣದ ಸಮೀಪವೇ ಅತೀ ನಿಧಾನಗತಿಯಲ್ಲಿ ರೈಲು ಸಾಗುವ ವೇಳೆ ಹಳಿ ತಪ್ಪಿದ್ದು, ರೈಲ್ವೆ ಲೋಕೊ ಪೈಲಟ್ ವಹಿಸಿದ ಮುನ್ನೆಚ್ಚರಿಕೆ ವಹಿಸಿದ ಹಿನ್ನೆಲೆಯಲ್ಲಿ ಅಪಾಯ ಸಂಭವಿಸಿಲ್ಲ. ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ಸ್ಥಳದಲ್ಲಿದ್ದು, ಅವರ ಸಮ್ಮುಖದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ದುರಸ್ತಿ ಕಾರ್ಯ ಮುಗಿಯುವವರೆಗೂ ಗಂಗಾವತಿ-ಕಾರಟಗಿ ರೈಲ್ವೆ ನಿಲ್ದಾಣಗಳ ನಡುವೆ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾರಟಗಿ-ಹುಬ್ಬಳ್ಳಿ, ಕಾರಟಗಿ-ಯಶವಂತಪುರ ಎಕ್ಸಪ್ರೆಸ್ ರೈಲುಗಳು ಈ ಮಾರ್ಗದಲ್ಲಿ ಸಂಚರಿಸುವುದಿಲ್ಲ ಎಂದು ತಿಳಿಸಲಾಗಿದೆ.