ಹತ್ಯೆಗೀಡಾದ ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಿ

ರೇಣುಕಾಚಾರ್ಯ
Advertisement

ದಾವಣಗೆರೆ: ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ ಕುಟಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವ ಜೊತೆಗೆ ದರ್ಶನ್‌ ಸೇರಿದಂತೆ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಚಾರ್ಯ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಸ್ವಾಮಿ ನಡೆಗೆ ಬೇಸರವಿದ್ದರೆ ದರ್ಶನ್‌ ಕರೆಸಿ ಬುದ್ಧ ಹೇಳಿ, ಒಂದೆರೆಡು ಕಪಾಳಕ್ಕೆ ಹೊಡೆದಿದ್ದರೂ ಸಾಕಿತ್ತು. ಆತ ತಪ್ಪು ಮಾಡಿದ್ದರೆ ಪೊಲೀಸ್‌ ಇಲಾಖೆಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಹೀಗೆ ಕ್ರೂರತನ ಮಾಡಿರುವುದು ಖಂಡನೀಯ ಎಂದರು.
ಈ ನೆಲದ ಕಾನೂನು ಪ್ರತಿಯೊಬ್ಬರೂ ಗೌರವಿಸಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ರೂ., ಪರಿಹಾರ ನೀಡಬೇಕು. ಮೃತನ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ದರ್ಶನ್‌ನ ಎಲ್ಲಾ ಸಿನಿಮಾಗಳನ್ನೂ ಬ್ಯಾನ್ ಮಾಡಬೇಕು. ಚಿತ್ರದುರ್ಗದ ಯುವಕನನ್ನು ಬೆಂಗಳೂರಿಗೆ ಕರೆಸಿಕೊಂಡು, ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು ಎಂದರು.