ಹಟಗಾರ ಜಗದ್ಗುರುಗಳ ಭವ್ಯ ಮೆರವಣಿಗೆ

Advertisement

ಕಣ್ಣು ಹಾಯಿಸಿದಷ್ಟು ಜನ, ಪಟ್ಟಣದಲ್ಲಿ ನಿರ್ಮಾಣಗೊಂಡಿದ್ದ ಜನಸ್ತೋಮ ದಾಖಲೆ ಬರೆಯುವಲ್ಲಿ ಕಾರಣವಾಗಿ, ಹಟಗಾರ ಸಮಾಜದ ಪೀಠಾರೋಹಣ ಕಾರ್ಯಕ್ರಮದ ಭವ್ಯ ಮೆರವಣಿಗೆಯು ನ ಭೂತೋ: ನ ಭವಿಷ್ಯತೀ ಎಂಬಂತೆ ಸಾಕ್ಷಿಯಾಗುವಲ್ಲಿ ಕಾರಣವಾಯಿತು.

ಬುಧವಾರದಂದು ನಗರದ ಜೇಡರ ದಾಸಿಮಯ್ಯ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯು ಎಸ್‌ಆರ್‌ಎ ಮೈದಾನದವರೆಗೆ ಸುಮಾರು 5 ಗಂಟೆಗಳ ಕಾಲ ನಡೆದ ಭವ್ಯ ಮೆರವಣಿಗೆ ಇತಿಹಾಸ ಸೃಷ್ಟಿಸುವಲ್ಲಿ ಕಾರಣವಾಯಿತು. ಜನರು ಸುಮಾರು 2 ಕಿ.ಮೀ.ನಷ್ಟು ಉದ್ದಯನೇಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆದ್ಯವಚನಕಾರ ಜೇಡರ ದಾಸಿಮಯ್ಯ ಭಾವಚಿತ್ರ ಹೊತ್ತ ಆನೆ, ಕುದುರೆ, ಗೊಂಬೆ ಕುಣಿತ, ವಿಶೇಷ ಬ್ಯಾಂಚೋ ಸೇರಿದಂತೆ ಅನೇಕ ವಾದ್ಯಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು.

ಮೆರವಣಿಗೆಯಲ್ಲಿ ಸುಮಾರು 3 ಸಾವಿರ ಸುಮಂಗಲೆಯರಿಂದ ಕಳಸ ಹೊತ್ತ ಕುಂಭಮೇಳವು ಇಡೀ ಪಟ್ಟಣದಾದ್ಯಂತ ಜನತೆ ನೀರು, ಹೂ ಚೆಲ್ಲುವದು ಕಾರ್ಯಕ್ರಮಕ್ಕೆ ಕಳೆಕಟ್ಟಿತ್ತು. ಶ್ವೇತ ಬಣ್ಣದಿಂದ ತಯಾರಾಗಿರುವ ಹೊಸ ಹಟಗಾರ ಧ್ವಜವು ಮೆರವಣಿಗೆಯಲ್ಲಿ ರಾರಾಜಿಸಿದವರು.

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಹಟಗಾರ ಸಮಾಜದ ನೂತನ ಜಗದ್ಗುರುಗಳಾಗಿ ಚಿಕ್ಕರೇವಣಸಿದ್ಧ ಶಿವಶರಣರನ್ನು ರಥೋತ್ಸವ ಮೂಲಕ ಮೆರವಣಿಗೆಯಲ್ಲಿ ರಾರಾಜಿಸಿದರು.

ಇಡೀ ಬನಹಟ್ಟಿ ಪಟ್ಟಣವೇ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.