ಹಕ್ಕು ಚಲಾಯಿಸಿದ ಬಸವರಾಜ ಹೊರಟ್ಟಿ

Advertisement

ಹುಬ್ಬಳ್ಳಿ: ವಿಧಾನ‌ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಅವರು ಮಂಗಳವಾರ ಮತದಾನ‌ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿ ಭಾರತ ದೇಶದ್ದೇ ಅತೀ ದೊಡ್ಡ ಪ್ರಜಾಪ್ರಭುತ್ವ. ಆದರೆ, ನಮ್ಮ ದೇಶದಲ್ಲಿ ಮತದಾನದ ಪ್ರಮಾಣ ಕಡಿಮೆ ಆಗುತ್ತಿದೆ. ಹೀಗಾಗಿ ದೇಶದಲ್ಲಿ ಕಡ್ಡಾಯ ಮತದಾನ ನಿಯಮ ಜಾರಿ ಮಾಡಬೇಕು. ಮತದಾನದ ದಿನ ರಜೆ ಇದ್ದಾಗ ಜನ ಮೋಜು ಮಸ್ತಿಗೆ ತೆರಳುತ್ತಾರೆ. ಮತದಾನದ ಮಹತ್ವ, ಚುನಾವಣೆಯ ಮಹತ್ವ ತಿಳಿಯದವರು ಹೀಗೆಲ್ಲ ಮಾಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರಿ ಸೇರಿದಂತೆ ಖಾಸಗಿ ನೌಕರರಿಗೆಗೂ ಮತದಾನ ಕಡ್ಡಾಯ ಮಾಡಬೇಕು. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಈ ಕಾರ್ಯ ಮಾಡಬೇಕು. ಕಲಿತವರು, ನೌಕರಿ ಮಾಡುವವರು ಮತದಾನದಿಂದ ವಿಮುಖರಾಗುತ್ತಿದ್ದಾರೆ.

ದುಡ್ಡು ಕೊಟ್ಟು ಓಟ್ ಹಾಕುವವರು ,ದುಡ್ಡು ತೆಗೆದುಕೊಂಡು ಓಟ್ ಹಾಕಿದ್ರೆ ಒಳ್ಳೆಯ ಕೆಲಸ ಮಾಡಿದ ಅಭ್ಯರ್ಥಿ ಏನು ಮಾಡಬೇಕು ಎಂದು ಕಿಡಿ ಕಾರಿದರು. ಅಲ್ಲದೆ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದರ.