ಹೊಸಪೇಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಕರ್ನಾಟಕ ಪ್ರವಾಸ ಮಾಡಲಿದ್ದು, ಈ ವೇಳೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಪೈಕಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹಾಗೂ ಹೊಸಪೇಟೆ ನೂತನ ರೈಲು ನಿಲ್ದಾಣ ಉದ್ಘಾಟನೆ ಸೇರಿವೆ. ಮೇಲ್ದರ್ಜೆಗೇರಿಸಿರುವ ಹಂಪಿ ಜಂಕ್ಷನ್ ರೈಲ್ವೆ ನಿಲ್ದಾಣ. ಈ ರೈಲು ನಿಲ್ದಾಣವನ್ನು ನೋಡಿದರೆ ಒಮ್ಮೆ ವಿಜಯನಗರ ಸಾಮ್ರಾಜ್ಯ ಕಣ್ಣೆದುರು ಬಂದು ನಿಲ್ಲುತ್ತದೆ. ಪ್ರವೇಶದಲ್ಲೇ ಗ್ರಾನೈಟಿನಲ್ಲಿ ಮಾಡಿರುವ ಹಂಪಿ ಕಲ್ಲಿನ ರಥದ ವಿನ್ಯಾಸ ನಿಮ್ಮನ್ನು ಸ್ವಾಗತಿಸುತ್ತದೆ. ಒಳಗಡೆ ಉಗ್ರನರಸಿಂಹ, ವಿಜಯ ನಗರ ಅರಸರ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳ ಉಬ್ಬು ಶಿಲ್ಪಗಳು ಸೇರಿದಂತೆ ಹಂಪಿಯ ಅನೇಕ ಕಲಾಕೃತಿಗಳನ್ನು ರಚಿಸಲಾಗಿದ್ದು ಅತ್ಯಂತ ಆಕರ್ಷಣೀಯವಾಗಿದೆ. ನಿಲ್ದಾಣದೊಳಗಿನ ಸ್ತಂಭಗಳು ಸಹ ಹಂಪಿಯ ವಾಸ್ತುಶಿಲ್ಪದ ಶೈಲಿಯಲ್ಲೇ ನಿರ್ಮಿಸಲಾಗಿದೆ.