ಮಂಡ್ಯ: ಸ್ಥಳೀಯ ಶಾಸಕರು ಪರ್ಸಂಟೇಜ್ ಪಡೆಯುತ್ತಿದ್ದಾರೆ ಎಂದು ಸಂಸದೆ ಸುಮಲತಾ ಮಂಡ್ಯ ಶಾಸಕರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಂಡರ್ ಆಗುತ್ತಿದ್ದಂತೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಕಮಿಷನ್ ನೀಡಬೇಕು. ಈ ವಿಚಾರವನ್ನು ಬಹಿರಂಗವಾಗಿ ಬಿಚ್ಚಿಡುತ್ತೇನೆ. ಸರ್ಕಾರದ ಡಿಪಾರ್ಟ್ಮೆಂಟ್ಗಳ ಜೊತೆ ಹೋರಾಡಿ ಸಾಕಾಗಿದೆ. ಯಾವುದೇ ಸಮಸ್ಯೆಯನ್ನು ಬಗೆಹರಿಸುವುದು ಸುಲಭವಾದ ಮಾತಲ್ಲ ಎಂದು ಸುಮಲತಾ ಆಕ್ರೋಶ ಹೊರಹಾಕಿದ್ದಾರೆ.