ಸೆ.2 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ..!ಪ್ರಧಾನಿ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಭಾರೀ ಸಿದ್ಧತೆ

Advertisement

ಮಂಗಳೂರು : ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಪ್ರಧಾನಿ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಭದ್ರತೆ ಸೇರಿ ಎಲ್ಲಾ ವ್ಯವಸ್ಥೆಯಾಗುತ್ತಿದೆ.

ನಾಳೆ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆಯಾಗಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್​​​ ಶಶಿಕುಮಾರ್​​ ಆದೇಶ ಹೊರಡಿಸಿದ್ಧಾರೆ. ಸುಗಮ ಸಂಚಾರ, ಭದ್ರತೆ, ಸಾರ್ವಜನಿಕ ಸುರಕ್ಷತೆಗಾಗಿ ಸಂಚಾರ ಬದಲಾವಣೆ ಮಾಡಲಾಗಿದೆ.

ನಾಳೆ ಬೆಳಗ್ಗೆ 6ರಿಂದ ಪ್ರಧಾನಿ ಕಾರ್ಯಕ್ರಮ ಮುಗಿಯೋವರೆಗೆ ಸಂಚಾರ ಬದಲಾವಣೆ ಇರಲಿದೆ. ಏರ್​​ಪೋರ್ಟ್​ನಿಂದ ಕಂಜಾರು – ಮರವೂರು – ಮರಕಡ – ಕಾವೂರು – ಬೊಂದೇಲ್, ಪದವಿನಂಗಡಿ – ಯೆಯ್ಯಾಡಿ – ಕೆ.ಪಿ.ಟಿ. ಜಂಕ್ಷನ್‌ – ಕೊಟ್ಟಾರ ಚೌಕಿ ಕೂಳೂರು – NMPTವರೆಗೆ ಹಾದು ಹೋಗುವ ರಸ್ತೆಗಳ ಎರಡೂ ಬದಿ ಪಾರ್ಕಿಂಗ್​ ನಿಷೇಧವಾಗಲಿದೆ.
ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನ ಬಳಿ ಪಾರ್ಕಿಂಗ್​ ನಿಷೇಧ ಮಾಡಲಾಗಿದ್ದು, ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲೇ ಸಾರ್ವಜನಿಕ ಸಮಾವೇಶ ನಡೆಯಲಿದೆ. ಮೋದಿ 3600 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ ಮಾಡಲಿದ್ದಾರೆ.