ಹುಬ್ಬಳ್ಳಿ: ವಿದ್ಯುತ್ ಚಾಲಿತ ರೈಲು ಸಂಚರಿಸುವ ಶಿರಡಿನಗರದ ರೈಲು ಹಳಿಯಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿದ್ದ ವಿದ್ಯಾರ್ಥಿಯೋರ್ವನಿಗೆ ವಿದ್ಯುತ್ ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ. ವಿನಾಯಕ ಎಂಬ ವಿದ್ಯಾರ್ಥಿಯೇ ತೀವ್ರವಾಗಿ ಗಾಯಗೊಂಡಿದ್ದು, ಆತನಿಗೆ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೇಲ್ವೆ ಹಳಿಯಲ್ಲಿ ಸೆಲ್ಪಿ ತೆಗೆದುಕೊಳ್ಳುವ ಸಮಯದಲ್ಲಿ ವಿದ್ಯುತ್ತ್ ತಗುಲಿ ಬಟ್ಟೆಗೆ ಬೆಂಕಿ ಹತ್ತಿ, ದೇಹಕ್ಕೂ ಆವರಿಸಿದೆ.